ಜನಗಾಂವ್, ಫೆ 12 (DaijiworldNews/HR): ನನ್ನನ್ನು ಕೆಣಕಬೇಡಿ, ನಾನು ಹುಲಿಯ ಮಗ ಒಂದು ವೇಳೆ ನನ್ನನ್ನು ಕೆಣಕಿದರೆ ದೆಹಲಿಯ ಅಧಿಕಾರದ ಗದ್ದುಗೆಯಿಂದ ನಿಮ್ಮನ್ನು ಓಡಿಸಬೇಕಾಗುತ್ತದೆ ಎಂದು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾನು ಹೋರಾಟಕ್ಕೆ ಸಿದ್ಧನಿದ್ದೇನೆ. ನೀವು ನನ್ನ ವಿರುದ್ಧ ಟೀಕೆ ಮಾಡಿರುವುದನ್ನು ನೋಡಿದ್ದೇನೆ. ದೆಹಲಿಯ ಕೋಟೆಗೆ ಬಿರುಗಾಳಿಯಾಗಲು ಸಿದ್ಧನಾಗಿದ್ದೇನೆ. ಎಚ್ಚರವಿರಲಿ ಮೋದಿ ಅವರೆ ನಾನು ಹುಲಿಯ ಮಗ ಎಂದರು.
ಇನ್ನು ಅಗತ್ಯವಾದರೆ ನಾನು ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಮಾಡಲು ಸಿದ್ದನಿದ್ದೇನೆ. ಕೇಂದ್ರ ಸರ್ಕಾರ ವಿದ್ಯುತ್ ಕ್ಷೇತ್ರದಲ್ಲಿ ಯಾವುದೇ ಸುಧಾರಣೆ ಮಾಡಿಲ್ಲ ಎಂದು ಅಸಮದಾನ ವ್ಯಕ್ತ ಪಡಿಸಿದ್ದಾರೆ.