ಭೋಪಾಲ್, ಫೆ 12 (DaijiworldNews/HR): ರೈಲ್ವೆ ಹಳಿ ಮೇಲೆ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಲು ವ್ಯಕ್ತಿಯೊಬ್ಬರು ಚಲಿಸುವ ಗೂಡ್ಸ್ ರೈಲಿನ ಮುಂದೆ ಹಾರಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಎಲ್ಲಾ ಕಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
ಕಾರ್ಪೆಂಟರ್ ಆಗಿರುವ ಮೊಹಮ್ಮದ್ ಮೆಹಬೂಬ್ ಅವರು ನಮಾಜ್ ಮಾಡಿದ ನಂತರ ಘಟನಾ ಸ್ಥಳದ ಬಳಿ ನಡೆದುಕೊಂಡು ಹೋಗುತ್ತಿದ್ದು, ಗೂಡ್ಸ್ ರೈಲು ಬರಲು ಪ್ರಾರಂಭಿಸಿದಾಗ ಮಹಿಳೆಯೊಬ್ಬರು ಬೆನ್ನಿನ ಮೇಲೆ ಹೊರೆಯನ್ನು ಹೊತ್ತುಕೊಂಡು ರೈಲ್ವೆ ಹಳಿ ದಾಟುತ್ತಿದ್ದು, ಮಹಿಳೆ ಭಯಭೀತರಾಗಿ ಹಳಿಗಳ ಮೇಲೆ ಮುಗ್ಗರಿಸಿ ಬಿದಿದ್ದು ರೈಲಿನ ಮಾರ್ಗದಿಂದ ಎದ್ದು ಹೋಗಲು ಸಾಧ್ಯವಾಗಲಿಲ್ಲ ಅದನ್ನು ಗಮನಿಸಿದ ಮೆಹಬೂಬ್ ಟ್ರ್ಯಾಕ್ ಮೇಲೆ ಹಾರಿ ಮಹಿಳೆಯ ಬಳಿಗೆ ಓಡಿ, ಟ್ರ್ಯಾಕ್ ಬೆಡ್ನ ಮಧ್ಯಕ್ಕೆ ಎಳೆದೊಯ್ದರು ಮತ್ತು ರೈಲು ಅವರ ಮೇಲೆ ಹಾದುಹೋಗುತ್ತಿದ್ದಂತೆ ತಲೆ ಎತ್ತದಂತೆ ತಡೆದಿದ್ದಾರೆ.
ಇನ್ನು ಘಟನೆಯ ವೀಡಿಯೋದಲ್ಲಿ, ಮೆಹಬೂಬ್ ಮಹಿಳೆಯ ತಲೆಯನ್ನು ಕೆಳಕ್ಕೆ ಹಿಡಿದಿರುವುದನ್ನು ನೋಡಬಹುದು, ಅದು ಅಂಡರ್ಕ್ಯಾರೇಜ್ನಿಂದ ಚಾಚಿಕೊಂಡಿರುವ ಯಾವುದನ್ನಾದರೂ ಹೊಡೆಯುವುದನ್ನು ತಡೆಯುತ್ತದೆ.