ನವದೆಹಲಿ, ಫೆ 12 (DaijiworldNews/KP): ಪ್ರತಿಯೊಂದು ಸಂಸ್ಥೆಗೂ ತನ್ನದೇ ಆದ ಡ್ರೆಸ್ ಕೋಡ್ ರೂಪಿಸುವ ಹಕ್ಕಿದೆ ಆದರೆ ವ್ಯವಸ್ಥೆಯು ಸಂವಿಧಾನದ ಪ್ರಕಾರ ನಡೆಯಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಕರ್ನಾಟಕದ ಹಿಜಾಬ್ ಗದ್ದಲ ತೀವ್ರ ರೂಪ ತಾಳಿದ್ದು, ಈ ಕುರಿತಂತೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಅವರು, ಸಂಸ್ಥೆಗೆ ತನ್ನದೇ ಆದ ಡ್ರೆಸ್ ಕೋಡ್ ರೂಪಿಸುವ ಹಕ್ಕಿದೆ, ಆದರೆ ಅದು ಭಾರತದ ಸಂವಿಧಾನದ ಮೂಲಕ ನಡೆಯುತ್ತದೆಯೇ ಹೊರತು ಶರಿಯಾ ಕಾನೂನಿನಿಂದಲ್ಲ ಎಂದು ಹೇಳಿದ್ದಾರೆ.
ಸಂಸ್ಥೆಗೆ ತನ್ನದೇ ಆದ ಡ್ರೆಸ್ ಕೋಡ್ ರೂಪಿಸುವ ಹಕ್ಕಿದ್ದು, ಅದು ಸಂವಿಧಾನದ ಪ್ರಕಾರ ಮಾಡಲಾಗುವುದು, ಅದರಲ್ಲಿ ಎಲ್ಲರ ಹಿತದೃಷ್ಟಿಯನ್ನು ಕೂಡಿರುತ್ತದೆ ಎಂದಿದ್ದಾರೆ.