ಮುಂಬೈ, ಫೆ 11 (DaijiworldNews/MS): ಪತ್ನಿ ಮತ್ತು ಮಗ ಸೇರಿ 54 ವರ್ಷದ ವ್ಯಕ್ತಿಯನ್ನು ಕೊಂದು ಆತನ ಶವವನ್ನು ಕಟ್ಟಡದ ಏಳನೇ ಮಹಡಿಯಿಂದ ಘಟನೆ ಮುಂಬೈನ ಅಂಬೋಲಿ ಪ್ರದೇಶದಲ್ಲಿ ನಡೆದಿದೆ.
"ಶಂತನುಕೃಷ್ಣ ಶೇಷಾದ್ರಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಪತ್ನಿ ಹಾಗೂ ಮಗ ಪೊಲೀಸರಿಗೆ ತಿಳಿಸಿದ್ದು ಈ ಹಿಂದೆಯೂ ಅವರು ತಮ್ಮ ಜೀವನವನ್ನು ಕೊನೆಗೊಳಿಸಲು ಪ್ರಯತ್ನಿಸಿದ್ದರು ಎಂದು ದೂರು ನೀಡಿದ್ದರು.ಆದರೆ, ತನಿಖೆ ವೇಳೆ ಅವರು ಸುಳ್ಳು ಹೇಳುತ್ತಿರುವುದು ಪೊಲೀಸರಿಗೆ ತಿಳಿದುಬಂದಿದೆ.
ಹೆಚ್ಚಿನ ಮಾಹಿತಿ ಕಲೆ ಹಾಕಿದಾಗ ಇವರಿಬ್ಬರು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು. ಕೌಟುಂಬಿಕ ಕಲಹವೇ ಆಘಾತಕಾರಿ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ, ಮನುಷ್ಯನ ಹೆಂಡತಿ ಮತ್ತು ಮಗನನ್ನು ಬಂಧಿಸಲಾಗಿದೆ ಮತ್ತು ನಾವು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಉಪ ಪೊಲೀಸ್ ಆಯುಕ್ತ ಮಂಜುನಾಥ ಶಿಂಗೆ ತಿಳಿಸಿದ್ದಾರೆ.