ಬೆಂಗಳೂರು, ಫೆ 12 (DaijiworldNews/KP): ಮಕ್ಕಳನ್ನು ಅಡ್ಡ ದಾರಿ ಹಿಡಿಸುವ ಕೆಲಸವನ್ನು ಪೋಷಕರು ಮತ್ತು ರಾಜಕಾರಣಿಗಳು ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳನ್ನು ತಪ್ಪು ದಾರಿಯನ್ನು ಹಿಡಿಸುವ ಕೆಲಸವನ್ನು ಪೋಷಕರು ಮತ್ತು ರಾಜಕಾರಣಿಗಳು ಮಾಡುತ್ತಿದ್ದಾರೆ, ಇಂತಹ ಕೆಟ್ಟ ಸಂಪ್ರದಾಯವನ್ನು ಶಾಲೆಯಲ್ಲಿ ಯಾರೂ ತರಬಾರದು ಎಂದು ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್ ಕೇಸರಿ ವಿವಾದ ಕುರಿತು ಪ್ರತಿಕ್ರಿಯೆ ನೀಡಿದರು.
ಇನ್ನು ಸೋಮವಾರದಿಂದ ರಾಜ್ಯಪಾಲರ ಭಾಷಣದ ಬಳಿಕ ವಿಧಾನ ಪರಿಷತ್ ಕಲಾಪ ಆರಂಭವಾಗಲಿದ್ದು, ನಿಯಮ 72 ಅಡಿಯಲ್ಲಿ ಚರ್ಚೆ ವೇಳೆ ನಿಯಮ ಉಲ್ಲಂಘನೆ ಮಾಡುವಂತಿಲ್ಲ ಹಾಗೂ ಸದನದಲ್ಲಿ ಭಿತ್ತಿ ಪತ್ರವನ್ನು ಪ್ರದರ್ಶಿಸುವಮತಿಲ್ಲ ಎಂದು ವಿಧಾನ ಪರಿಷತ್ ಸದಸ್ಯರಿಗೆ ಸೂಚನೆ ನೀಡಿದರು.
ಕಳೆದ ಬಾರಿ ನಡೆದ ತರಬೇತಿ ಶಿಬಿರದಲ್ಲಿ 48 ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು, ಇನ್ನು ಈ ಬಾರಿಯ ಪರಿಷತ್ ಕಲಾಪ 60 ದಿನ ನಡೆಯಬೇಕೆಂದು ಅನೇಕ ಜನರ ಅಭಿಪ್ರಾಯ ಇದೆ, ಅಲ್ಲದೆ ಕಲಾಪದಲ್ಲಿ ಸರ್ಕಾರ ಒಪ್ಪಿಕೊಂಡರೆ ಚುನಾವಣಾ ಸುಧಾರಣೆ ಬಗ್ಗೆ ಚರ್ಚೆ ಹಮ್ಮಿಕೊಳ್ಳುವ ಚಿಂತನೆ ಇದೆ ಎಂದರು