ದೇವನಹಳ್ಳಿ, ಫೆ 12 (DaijiworldNews/KP): ಮನೆಬಿಟ್ಟು ಬಂದಿದ್ದ ಯುವತಿಯನ್ನು ಸಹಾಯ ಮಾಡುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಅಕ್ರಮವಾಗಿ ದೆಹಲಿಗೆ ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಬಂಧಿತ ಆರೋಪಿಯನ್ನು ಬೆಂಗಳೂರಿನಲ್ಲಿ ಟ್ರಾವೆಲ್ ಏಜೆನ್ಸಿಯಾಗಿ ಕೆಲಸ ಮಾಡುತ್ತಿದ್ದ ನಾಗೇಶ್ ಎಂದು ಗುರುತಿಸಲಾಗಿದೆ.
ಯುವತಿ ಕ್ಷುಲ್ಲಕ ವಿಚಾರಕ್ಕೆ ಮನೆಯಲ್ಲಿ ಜಗಳ ಮಾಡಿಕೊಂಡು ಮನೆ ಬಿಟ್ಟು ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದು, ಬೆಂಗಳೂರಿನಲ್ಲಿ ಯಾರ ಪರಿಚಯವಿಲ್ಲದ ಕಾರಣ ಮೆಜೆಸ್ಟಿಕ್ನಲ್ಲಿ ಒಬ್ಬಳೇ ಕುಳಿತ್ತಿದ್ದಳು ಇದನ್ನು ಗಮನಿಸಿದ ನಾಗೇಶ್ ಆಕೆಯನ್ನು ವಿಚಾರಿಸಿದ್ದು, ಆಕೆ ನಡೆದ ವಿಚಾರವನ್ನು ತಿಳಿಸಿದ ಬಳಿಕ ಸಹಾಯ ಮಾಡುವುದಾಗಿ ನಂಬಿಸಿ ಆಕೆಯನ್ನು ದೇವನಹಳ್ಳಿಗೆ ಕರೆತಂದು ಅತ್ಯಾಚಾರವೆಸಗಿದ್ದಾನೆ.
ದೆಹಲಿಗೆ ಏರ್ ಪೋರ್ಟ್ನಲ್ಲಿ ತಪಾಸಣೆ ಕೇಂದ್ರದಲ್ಲಿ ಆರೋಪಿ ಮತ್ತು ಯುವತಿಯನ್ನು ಕಂಡು ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ, ಈ ವೇಳೆ ಆರೋಪಿ ಆಕೆಯನ್ನು 10 ಸಾವಿರ ರೂಪಾಯಿಗೆ ವೇಶ್ಯಾವಾಟಿಕೆ ಅಡ್ಡೆಗೆ ಮಾರಾಟ ಮಾಡಲು ದೆಹಲಿಗೆ ಕರೆದುಕೊಂಡು ಹೋಗುತ್ತಿರುವದಾಗಿ ಬಾಯಿಬಿಟ್ಟಿದ್ದಾನೆ.