ಬಿಜಾಪುರ, ಫೆ 12 (DaijiworldNews/HR): ಮಾವೋವಾದಿಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಓರ್ವ ಪ್ಯಾರಾಮಿಲಿಟರಿ ಅಧಿಕಾರಿ ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಎನ್ಕೌಂಟರ್ನಲ್ಲಿ ಓರ್ವ ಪ್ಯಾರಾಮಿಲಿಟರಿ ಅಧಿಕಾರಿ ಮೃತಪಟ್ಟು, ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಅಧಿಕಾರಿ ಮತ್ತು ಇನ್ನೊಬ್ಬ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಇನ್ನು ಬಿಜಾಪುರದ ಉಸೂರ್ ಬ್ಲಾಕ್ ನ ಅರಣ್ಯ ಪ್ರದೇಶದಲ್ಲಿ ಸಿಆರ್ಪಿಎಫ್ನ 168 ಬೆಟಾಲಿಯನ್ ಮತ್ತು ಮಾವೋವಾದಿಗಳ ನಡುವೆ ಎನ್ಕೌಂಟರ್ ನಡೆದಿದ್ದು, ಈ ಗುಂಡಿನ ಚಕಮಕಿಯಲ್ಲಿ ಜಾರ್ಖಂಡ್ ಮೂಲದ ಸಹಾಯಕ ಕಮಾಂಡೆಂಟ್ ಎಸ್ ಬಿ ಟಿರ್ಕಿ ಸಾವನ್ನಪ್ಪಿದ್ದಾರೆ.