ನವದೆಹಲಿ, ಫೆ 11 (DaijiworldNews/KP): ಗುಜರಾತ್ನ ಭುಜ್ನ ಹರಾಮಿ ನಲ್ಲಾದ ಕ್ರೀಕ್ ಪ್ರದೇಶದಲ್ಲಿ 11 ಪಾಕಿಸ್ತಾನಿ ಮೀನುಗಾರಿಕಾ ಬೋಟ್ಗಳನ್ನು ವಶಪಡಿಸಿಕೊಂಡಿರುವುದಾಗಿ ಭಾರತೀಯ ಗಡಿ ಭದ್ರತಾ ಪಡೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಪಾಕಿಸ್ತಾನಿ ಮೀನುಗಾರರು ಒಳಗೆ ನುಗ್ಗಿರುವ ಮಾಹಿತಿ ಲಭ್ಯವಾದ ಹಿನ್ನಲೆ ಗಡಿ ಭದ್ರತಾ ಪಡೆಯು ನಡೆಸಿದ ಡ್ರೋನ್ ಕಾರ್ಯಾಚರಣೆಯಲ್ಲಿ 11 ಪಾಕಿಸ್ತಾನಿ ಮೀನುಗಾರಿಕಾ ಬೋಟ್ಗಳ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಗಡಿ ಭದ್ರತಾ ಪಡೆಯು ಹರಾಮಿ ನಲ್ಲಾ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನದಿಂದ ಪ್ರಾರಂಭವಾದ ಬೃಹತ್ ಶೋಧ ಕಾರ್ಯಾಚರಣೆಯಲ್ಲಿ 8 ಪಾಕಿಸ್ತಾನಿ ಬೋಟ್ಗಳನ್ನು ವಶಪಡಿಸಿಕೊಳಲಾಗಿತ್ತು ಹಾಗೂ ಗುರುವಾರ 3 ಬೋಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸದ್ಯ ಪಾಕಿಸ್ತಾನಿ ಒಳನುಸುಳುಕೋರರಿಗಾಗಿ 30 ಗಂಟೆಗಳಿಗೂ ಹೆಚ್ಚು ಸಮಯದಿಂದ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಬಿಎಸ್ಎಫ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೇ, ಆಕ್ರಮವಾಗಿ ಗಡಿಯನ್ನು ಪ್ರವೇಶ ಮಾಡಿದ ಪಾಕಿಸ್ತಾನದ ಮೀನುಗಾರರಿಗೆ ಇಲ್ಲಿಂದ ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.