ಬೆಂಗಳೂರು, ಫೆ 11 (DaijiworldNews/HR): ರಿಚೆಲ್ ಪ್ರಿಶಾಳ ಎಂಬ ಬಾಲಕಿಯನ್ನು ಮಾ.11ರಂದು ತಂದೆ ರಾಜು ತನ್ನ ಬೈಕ್ನಲ್ಲಿ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ರಾಮಮೂರ್ತಿನಗರದ ಕೌಡಲಹಳ್ಳಿಯಲ್ಲಿ ಮರದ ಒಣಕೊಂಬೆ ಕೊಂಬೆ ಬಾಲಕಿ ತಲೆ ಮೇಲೆ ಬಿದ್ದು, ಗಂಭೀರ ಗಾಯಗೊಂಡು ಸುಮಾರು 702 ದಿನಗಳ ಸತತ ಚಿಕಿತ್ಸೆ ಪಡೆದರು ಪ್ರಯೋಜನವಾಗದೆ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾಳೆ.
ಮರದ ಒಣಕೊಂಬೆ ಕೊಂಬೆ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಬಾಲಕಿ ಕೋಮಾಗೆ ಜಾರಿದ್ದು, ಸತತ 702 ದಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಿಸಲಿಲ್ಲ.
ಇನ್ನು ದೇವರು ನನಗೆ ಮಗಳನ್ನು ಕೊಟ್ಟು ಕಿತ್ತುಕೊಂಡ. ಒಂದು ಕ್ಷಣದಲ್ಲಿ ಎಲ್ಲವೂ ನಾಶವಾಯ್ತು. ನನ್ನ ಮಗಳಿಗೆ ಆದ ಪರಿಸ್ಥಿತಿ ಯಾರಿಗೂ ಬರೋದು ಬೇಡ ಎಂದು ಪ್ರಿಶಾಳ ತಾಯಿ ಹೇಳಿದ್ದಾರೆ.
ಕೌಡಲಹಳ್ಳಿ ಭಾಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಮರಗಳ ಕೊಂಬೆಗಳು ಒಣಗಿದ್ದು, ತೆರವು ಮಾಡುವಂತೆ ಪಾಲಿಕೆಯ ವಾರ್ಡ್ ಕಚೇರಿ ಮತ್ತು ನಿಯಂತ್ರಣ ಕೊಠಡಿಗೆ ಸ್ಥಳೀಯರು ದೂರು ನೀಡಿದ್ದರು. ಆದರೆ ಪಾಲಿಕೆ ಸಿಬ್ಬಂದಿ ನಿರ್ಲಕ್ಷ್ಯಿಸಿದ್ದರು. ಪ್ರಿಶಾ ಮೇಲೆ ಕೊಂಬೆ ಬಿದ್ದು ಅಪಘಾತವಾದಾಗ ಈ ಘಟನೆಗೆ ಬಿಬಿಎಂಪಿಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ನು ಪಾಲಿಕೆ ಅಧಿಕಾರಿಗಳ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.