ರಾಯಚೂರು, ಫೆ 11 (DaijiworldNews/KP): ಮದುವೆ ಮಾಡಿಸಿಲ್ಲ ಅನ್ನೋ ಕಾರಣಕ್ಕೆ ಸ್ವಂತ ಮಗನಿಂದಲೇ ತಂದೆ ಹತ್ಯೆಯಾದ ಘಟನೆ ರಾಯಚೂರು ನಗರದ ಗೋಶಾಲೆ ಹಿಂಭಾಗ ಫೆ.9 ರಂದು ನಡೆದಿದೆ.
ಮೃತರನ್ನು ನಿವೃತ್ತ ಎಎಸ್ಐ ಬಸವರಾಜಪ್ಪ(75) ಹಾಗೂ ಬಂಧಿತ ಆರೋಪಿ ಜಗದೀಶ್ (38) ಎಂದು ಗುರುತಿಸಲಾಗಿದೆ.
ನಿವೃತ್ತ ಎಎಸ್ ಐ ಬಸವರಾಜಪ್ಪಗೆ ಐದು ಜನ ಮಕ್ಕಳಿದ್ದು, ಮೂವರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಸಿದ್ದು, ಹಿರಿಯ ಮಗ ಶಿವರಾಜ್ (40) ಹಾಗೂ ಕಿರಿಯ ಮಗ ಜಗದೀಶ್ (37) ಇಬ್ಬರಿಗೂ ಮದುವೆಯಾಗಿಲಿಲ್ಲ, ಈ ಕಾರಣದಿಂದ ಕಿರಿಯ ಮಗ ಮಾನಸಿಕ ಕಿನ್ನತೆಗೆ ಒಳಗಾಗಿ ಮದ್ಯ ವ್ಯಸನಿಯಾಗಿದ್ದ ಎನ್ನಲಾಗಿದೆ.
ಎಂದಿನಂತೆ ಮದ್ಯದ ಅಮಲಿನಲ್ಲಿದ್ದ ಜಗದೀಶ್, ಮದುವೆ ಮಾಡಿಸಲಿಲ್ಲ ಅನ್ನೋ ಕಾರಣಕ್ಕೆ ತಂದೆ ಮೇಲೆ ಕೋಪಗೊಂಡು ಗೋಶಾಲೆ ಹಿಂಭಾಗ ಕೊಲೆ ಮಾಡಿದ್ದ ಎಂಬ ಸತ್ಯ ತನಿಖೆ ವೇಳೆ ಬಯಲಾಗಿದೆ.
ಈ ಬಗ್ಗೆ ರಾಯಚೂರಿನ ಮಾರ್ಕೆಟ್ ಯಾರ್ಡ್ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.