ಬೆಂಗಳೂರು, ಫೆ 11 (DaijiworldNews/HR): ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹಮ್ಮದ್ನಲಪಾಡ್ ಗುರುವಾರ ಅಧಿಕಾರ ಸ್ವೀಕರಿಸಿದ್ದು, ಈ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ನಲಪಾಡ್, ಯುವ ಕಾಂಗ್ರೆಸ್ ಘಟಕವನ್ನು ಮುಂಚೂಣಿಯಿಂದ ಮುನ್ನಡೆಸಲು ಐದು ಅಂಶಗಳ ಅಜೆಂಡಾ ರೂಪಿಸಿದ್ದೇನೆ. ಅತ್ಯಧಿಕ ಸದಸ್ಯತ್ವ ದಾಖಲಾತಿ, ಬೂತ್ ಮಟ್ಟದಲ್ಲಿ ಒಬ್ಬ ಡಿಜಿಟಲ್ ಯುವಕರನ್ನು ಆಯ್ಕೆ ಮಾಡಿ ವಾಟ್ಸಾಪ್, ಫೇಸ್ ಬುಕ್ ಸೇರಿದಂತೆ ತಂತ್ರಜ್ಞಾನದ ತರಬೇತಿ ನೀಡಿ ಪಕ್ಷದ ಕಾರ್ಯಕ್ರಮಗಳು ಗರಿಷ್ಠ ಜನರಿಗೆ ತಲುಪುವಂತೆ ವಾರ್ಷಿಕವಾಗಿ ಬಸವ ಜಯಂತಿ, ಕ್ರಿಸ್ ಮಸ್, ಈದ್, ದೀಪಾವಳಿ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.
ಇನ್ನು ಸಿದ್ದರಾಮಯ್ಯ ಅವರು ನನ್ನ ಕಷ್ಟದ ಸಮಯದಲ್ಲಿ ನನ್ನೊಂದಿಗಿದ್ದು ನನಗೆ ಈ ಹಂತದವರೆಗೆ ಮಾರ್ಗದರ್ಶನ ನೀಡಿದರು, ನಿರ್ಣಾಯಕ ಅವಧಿಯಲ್ಲಿ ಡಿಕೆ ಶಿವಕುಮಾರ್ ನನ್ನೊಂದಿಗೆ ಇದ್ದು ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬಿದರು ಎಂದು ಹೇಳಿದ್ದಾರೆ.