ಗೋವಾ, ಫೆ 11 (DaijiworldNews/KP): ಬಿಜೆಪಿಯಿಂದ ಹಣ ಪಡೆದುಕೊಳ್ಳಿ, ಆದರೆ ಟಿಎಂಸಿಗೆ ಮತ ನೀಡಿ ಎಂದು ಕಾಂಗ್ರೆಸ್ (ಟಿಎಂಸಿ) ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ದಿದಾರರೊಂರಿಗೆ ಮಾತನಾಡಿದ ಅವರು, 'ನೀವು ಬಿಜೆಪಿಯಿಂದ ಹಣ ತೆಗೆದುಕೊಳ್ಳಿ, ಆದರೆ ಟಿಎಂಸಿಗೆ ಮತ ಹಾಕಿ. 2017ರಲ್ಲಿ ಗೋವಾದವರಿಗೆ ದ್ರೋಹ ಮಾಡಿದಂತೆ ಬಿಜೆಪಿಗೆ ದ್ರೋಹ ಮಾಡಿ' ಎಂದು ಹೇಳಿದ್ದಾರೆ.
ಗೋವಾದಲ್ಲಿ ಬಿಜೆಪಿ ತಮ್ಮ ಅಧಿಕಾರವನ್ನು ದುರುಪಯೋಗಪಡೆಸಿಕೊಳ್ಳುತ್ತಿದೆ, ಟಿಎಂಸಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ ಬಳಿಕ ಬಿಜೆಪಿಯ ಆದೇಶದ ಮೇರೆಗೆ ಜಾರಿ ನಿರ್ದೇಶನಾಲಯ ನನಗೆ ಎಂಟರಿಂದ 10 ಬಾರಿ ಸಮನ್ಸ್ ಜಾರಿ ಮಾಡಿದೆ ಎಂದು ಆರೋಪಿಸಿದ್ದಾರೆ.
ಇನ್ನು ಬಿಜೆಪಿ ಎಷ್ಟೇ ಬೆದರಿಸಿದರೂ ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಬದುಕಿರುವವರೆಗೂ, ನನ್ನ ರಕ್ತನಾಳಗಳಲ್ಲಿ ರಕ್ತ ಹರಿಯುವವರೆಗೂ, ನಾನು ಜನರ ಹಕ್ಕುಗಳಿಗಾಗಿ ಹೋರಾಡುತ್ತಲೇ ಇರುತ್ತೇನೆ ಎಂದಿದ್ದಾರೆ.
ಗೋವಾದಲ್ಲಿ ಫೆಬ್ರುವರಿ 14ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.