ಗುರುಗ್ರಾಂ, ಫೆ 11 (DaijiworldNews/HR): ಗುರ್ ಗಾಂವ್ ನ ಸೆಕ್ಟರ್ 109ರ ಚಿಂಟೆಲ್ಸ್ ಪ್ಯಾರಾಡಿಸೊ ವಸತಿ ಸಂಕೀರ್ಣದಲ್ಲಿ 18 ಮಹಡಿಗಳ ಮನೆಯಲ್ಲಿನ 6ನೇ ಮಹಡಿಯ ಅಪಾರ್ಮೆಂಟ್ ಒಂದರ ಮೇಲ್ಛಾವಣಿ ಕುಸಿದು ಇಬ್ಬರು ಮೃತಪಟ್ಟು, ಅನೇಕ ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.
18 ಮಹಡಿಗಳ ಚಿಂಟೆಲ್ಸ್ ಪ್ಯಾರಾಡಿಸೊ ವಸತಿ ಸಂಕೀರ್ಣದ ಆರನೇ ಮಹಡಿಯ ಅಪಾರ್ಟ್ ಮೆಂಟ್ ನ ಲಿವಿಂಗ್ ರೂಮ್ ಮಹಡಿ ಮೊದಲು ಕೆಳಗಿಳಿದಿದೆ ಎಂದು ಆರಂಭಿಕ ವರದಿಗಳು ತಿಳಿಸಿವೆ.
ಇನ್ನು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಜನರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ (ಎನ್ ಡಿಆರ್ ಎಫ್) ತಂಡಗಳು ರಕ್ಷಣಾ ಕಾರ್ಯವನ್ನು ನಡೆಸುತ್ತಿವೆ.