ಬೆಂಗಳೂರು, ಫೆ. 10 (DaijiworldNews/SM): ಮುಷ್ಕರದಲ್ಲಿ ಭಾಗಿಯಾಗಿಯಾದ ಕಾರಣಕ್ಕೆ ಸೇವೆಯಿಂದ ವಜಾಗೊಂಡಿದ್ದ ನೌಕರರನ್ನು ಮರು ನೇಮಕಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಈ ಹಿಂದೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ನೌಕರರನ್ನು ಸೇವೆಯಿಂಡ ವಜಾಗೊಳಿಸಲಾಗಿತ್ತು. ಆದರೆ, ಸರಕಾರ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ. ವಜಾಗೊಂಡ ನೌಕರರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ. ಈಗಾಗಲೇ 100 ನೌಕರರು, ನಾಳೆ 200 ನೌಕರರ ಮರು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ಈಗಾಗಲೇ 1500 ಜನರನ್ನು ಅಮಾನತುಗೊಂಡವರನ್ನು ವಾಪಸ್ ಪಡೆಯಲಾಗಿದೆ. 1353 ಜನರು ವಜಾಗೊಂಡಿದ್ದಾರೆ, ವಜಾಗೊಂಡವರನ್ನು ವಾಪಸ್ ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ಮಾನವೀಯತೆಯ ದೃಷ್ಟಿಯಿಂದ ಮರು ನೇಮಕ ಆದೇಶ ನೀಡಲಾಗುತ್ತಿದೆ, ಮೊದಲ ಹಂತದಲ್ಲಿ 100 ಜನರಿಗೆ ನೇಮಕ ಮಾಡಲಾಗುತ್ತಿದೆ ಉಳಿದವರಿಗೆ ಹಂತ ಹಂತವಾಗಿ ಮರು ನೇಮಕ ಮಾಡಲಾಗುತ್ತಿದೆ. ಈ ತಿಂಗಳ ಒಳಗೆ 700 ಮಂದಿಗೆ ನೇಮಕಾತಿ ನೀಡಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದರು.