ನವದೆಹಲಿ, ಫೆ 10 (DaijiworldNews/HR): 'ದಿ ಗ್ರೇಟ್ ಖಲಿ' ಖ್ಯಾತಿಯ ವೃತ್ತಿಪರ 'ಡಬ್ಲ್ಯುಡಬ್ಲ್ಯುಇ' ಕುಸ್ತಿಪಟು ದಲೀಪ್ ಸಿಂಗ್ ರಾಣಾ ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಪಂಜಾಬ್ನಲ್ಲಿ ಫೆಬ್ರವರಿ 20 ರಂದು ಒಂದೇ ಹಂತದ ಮತದಾನ ನಡೆಯಲಿದ್ದು ಇದೇ ಅವದಿಯಲ್ಲೇ ದಿ ಗ್ರೇಟ್ ಖಲಿ ಅವರನ್ನು ಬಿಜೆಪಿಯು ಪಕ್ಷಕ್ಕೆ ಸೇರಿಸಿಕೊಂಡಿದೆ.
ಬಿಜೆಪಿಗೆ ಸೇರ್ಪಡೆಗೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ಮೋದಿ ಅವರು ರಾಷ್ಟ್ರಕ್ಕಾಗಿ ಮಾಡಿದ ಕೆಲಸವು ಅವರನ್ನು ಪ್ರಧಾನಿಯನ್ನಾಗಿ ಮಾಡಿದೆ ಎಂದು ನಾನು ಭಾವಿಸಿದ್ದೇನೆ. ಹಾಗಾಗಿ, ರಾಷ್ಟ್ರದ ಅಭಿವೃದ್ಧಿಗಾಗಿ ಅವರ ಆಡಳಿತದಲ್ಲಿ ನಾನು ಕೂಡ ಭಾಗವಾಗಬೇಕೆಂದು ಇಚ್ಚಿಸುತ್ತಿದ್ದೇನೆ ಎಂದು ಖಲಿ ಹೇಳಿದ್ದಾರೆ.
ಇನ್ನು ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ 2020ರಲ್ಲಿ ದೆಹಲಿ ಗಡಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಖಲಿ ಬೆಂಬಲಿಸಿದ್ದರು ಎನ್ನಲಾಗಿದೆ.