ದೆಹಲಿ, ಫೆ 10 (DaijiworldNews/HR): ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಫೆಬ್ರವರಿ 14 ರಿಂದ ಅನ್ವಯವಾಗುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಇಂದು ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಫೆಬ್ರವರಿ 14ರಿಂದ ಹೊಸ ಮಾರ್ಗಸೂಚಿಗಳು ಜಾರಿಗೆ ಬರಲಿದ್ದು ಕೇಂದ್ರ ಸರ್ಕಾರವು ಈ ಹಿಂದೆ ಕಡ್ಡಾಯಗೊಳಿಸಿದಂತೆ 7 ದಿನಗಳ ಹೋಮ್ ಕ್ವಾರಂಟೈನ್ ಬದಲಾಗಿ 14 ದಿನಗಳ ನಂತರದ ಸ್ವಯಂ-ಮೇಲ್ವಿಚಾರಣೆ ವಿಧಾನವನ್ನು ಅಂತಾರಾಷ್ಟ್ರೀಯ ಪ್ರಯಾಣ ಮಾಡಿ ದೇಶಕ್ಕೆ ಆಗಮಿಸುವರಿಗೆ ಶಿಫಾರಸು ಮಾಡಿದೆ.
ಇನ್ನು ಈ ಹಿಂದೆ ಕೆಲವು ದೇಶಗಳಲ್ಲಿ ಅಪಾಯಕಾರಿ ಎಂದು ನೀಡಲಾಗಿದ್ದ ಟ್ಯಾಗ್ನ್ನು ಇದೀಗ ತೆಗೆದು ಹಾಕಲಾಗಿದ್ದು, 82 ದೇಶಗಳಿಂದ ಆಗಮಿಸಿದ ಪ್ರಯಾಣಿಕರಿಗೆ ಈ ಹಿಂದೆ 72 ಗಂಟೆಗಳ ಅವಧಿಯಲ್ಲಿ ಆರ್ಟಿ ಪಿಸಿಆರ್ ವರದಿಯನ್ನು ತೋರಿಸುವ ಬದಲು ಎರಡು ಡೋಸ್ ಲಸಿಕೆಗಳನ್ನು ಪಡೆದ ಬಗ್ಗೆ ವರದಿ ನೀಡಿದರೆ ಸಾಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.