ನವದೆಹಲಿ, ಫೆ 10 (DaijiworldNews/MS): ಉಡುಪಿಯಿಂದ ಉಡುಪಿನಿಂದ ಆರಂಭವಾದ ಹಿಜಾಬ್ ವಿವಾದ ಬಳಿಕ ರಾಜ್ಯಾದ್ಯಂತ ವ್ಯಾಪಿಸಿದ್ದು, ಈ ವಿಚಾರ ಇದೀಗ ದೇಶ ಮಾತ್ರವಲ್ಲದೆ ದೇಶದಾಚೆಗೂ ಗಮನ ಸೆಳೆದಿದೆ. ಮಾತ್ರವಲ್ಲ, ಈ ಹಿಜಾಬ್ ವಿವಾದ ಕುರಿತಂತೆ ಎಲ್ಲೆಡೆಯಿಂದ ಪರ-ವಿರೋಧ ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿವೆ.
ಹಿಜಾಬ್ ವಿವಾದದ ಕುರಿತಾಗಿ ನಟಿ ಹಾಗೂ ಬಿಜೆಪಿ ಸಂಸದೆ ಹೇಮಾಮಾಲಿನಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಶಾಲೆಗಳು ಇರುವುದು ಶಿಕ್ಷಣಕ್ಕಾಗಿ, ಧಾರ್ಮಿಕ ವಿಚಾರಗಳನ್ನು ಅಲ್ಲಿಗೆ ಕೊಂಡೊಯ್ಯಬಾರದು ಎಂಬುದಾಗಿ ಅವರು ಹೇಳಿಕೆ ನೀಡಿದ್ದಾರೆ.
ಮಾತ್ರವಲ್ಲ, ಪ್ರತಿ ಶಾಲೆಗೂ ತನ್ನದೇ ಆದ ಸಮವಸ್ತ್ರ ಇರುತ್ತದೆ, ಶಾಲೆಯ ಹೊರಗೆ ನೀವು ಏನನ್ನು ಬೇಕಾದರೂ ಧರಿಸಬಹುದು, ಆದರೆ ಶಾಲೆಯ ಒಳಗೆ ಸಮವಸ್ತ್ರವನ್ನು ಎಲ್ಲರೂ ಗೌರವಿಸಬೇಕು ಎಂದು ಹೇಮಾಮಾಲಿನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.