ಉತ್ತರ ಕನ್ನಡ, ಫೆ 10 (DaijiworldNews/HR): ಉತ್ತರ ಕನ್ನಡ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪರಿಸರ ಹಾಡುಗಾರ ಮಾದೇವ ವೇಳಿಪ (90) ಅವರು ಇಂದು ನಿಧನರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾರ್ಟೋಳಿ ಗ್ರಾಮದಲ್ಲಿ ವಾಸವಾಗಿದ್ದ ಮಾದೇವ ವೇಳಿಪ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಇಂದು ಮೃತಪಟ್ಟಿದ್ದಾರೆ.
ಮಾದೇವ ವೇಳಿಪ ಅವರು ಅನೇಕ ಪರಿಸರ ಹಾಡುಗಳನ್ನು ಹಾಡುತ್ತಿದ್ದು, ಇದನ್ನು ಗುರ್ತಿಸಿದ್ದಂತ ರಾಜ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು, ಜಾನಪದ ಪ್ರಶಸ್ತಿ ಕೂಡ ಲಭಿಸಿದೆ.