ಮುಂಬೈ, ಫೆ 10 (DaijiworldNews/MS): ಕೋವಿಡ್ ಸೋಂಕು ತಡೆಗೆ ಶೀಘ್ರ ನೇಸಲ್ ಸ್ಪ್ರೇ ಮಾರುಕಟ್ಟೆಗೆ ಕಾಲಿಟ್ಟಿದೆ. ಮುಂಬೈ ಮೂಲದ ಔಷಧೀಯ ಕಂಪನಿ ಗ್ಲೆನ್ಮಾರ್ಕ್ ಸೋಂಕಿತರ ಚಿಕಿತ್ಸೆಗಾಗಿ ಫ್ಯಾಬಿಸ್ಪ್ರೇ ಹೆಸರಿನಲ್ಲಿ ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇಯನ್ನು ಬಿಡುಗಡೆ ಮಾಡಿದ್ದು ಶೀಘ್ರ ಜನರ ಬಳಕೆಗೆ ಬರುವ ಸಾಧ್ಯತೆ ಇದೆ.
ಕಂಪನಿ ಹೇಳಿರುವ ಪ್ರಕಾರ, ನೇಸಲ್ ಸ್ಪ್ರೇ ನಲ್ಲಿರುವ ಔಷಧ ಶ್ವಾಸಕೋಶದೊಳಗೆ ಇರುವ ಸೋಂಕಿನ ವಿರುದ್ದ ಹೋರಾಡುವುದಿಲ್ಲ, ಆದರೆ ಸೋಂಕು ಶ್ವಾಸಕೋಶ ಸೇರುವುದರೊಳಗೆಯೇ , ಸೋಂಕಿನ ವಿರುದ್ದ ಭೌತಿಕ ಮತ್ತು ರಸಾಯನಿಕವಾಗಿ ತಡೆಯಾಗಿ ವರ್ತಿಸುತ್ತದೆ.
ಭಾರತದಲ್ಲಿ ನೇಸಲ್ ಸ್ಪ್ರೇನ 3ನೇ ಹಂತದ ಪ್ರಯೋಗವು ಅಂತಿಮ ಹಂತವನ್ನು ಪೂರೈಸಿದೆ ಮತ್ತು 24 ಗಂಟೆಗಳಲ್ಲಿ 94% ಮತ್ತು 48 ಗಂಟೆಗಳಲ್ಲಿ ಶೇಕಡಾ 99 ರಷ್ಟು ವೈರಲ್ ಲೋಡ್ ಅನ್ನು ಕಡಿಮೆ ಮಾಡಿದೆ. ನೈಟ್ರಿಕ್ ಆಕ್ಸೈಡ್ ನೇಸಲ್ ಸ್ಪ್ರೇ ಸುರಕ್ಷಿತವಾಗಿದೆ ಎಂದು ಕಂಪನಿ ತಿಳಿಸಿದೆ. ಗ್ಲೆನ್ಮಾರ್ಕ್ ಫ್ಯಾಬಿಸ್ಪ್ರೇ ಎಂಬ ಬ್ರ್ಯಾಂಡ್ ಹೆಸರಿನಲ್ಲಿ NONS ಅನ್ನು ಮಾರುಕಟ್ಟೆಗೆ ತರಲು ತಯಾರಿ ನಡೆಸಿದೆ.
ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇಯನ್ನು ಮೂಗಿಗೆ ಸ್ಪ್ರೇ ಮಾಡಿದಾಗ ವೈರಸ್ ವಿರುದ್ಧ ಹೋರಾಡಿ, ವೈರಸ್ ವ್ಯಾಪಿಸದಂತೆ, ಶ್ವಾಸಕೋಶಕ್ಕೆ ಹಾನಿಯಾಗದಂತೆ ತಡೆಯುತ್ತದೆ. ಭಾರತದಲ್ಲಿ ಇದನ್ನು 3 ಹಂತದ ಕ್ಲಿನಿಕಲ್ ಪ್ರಯೋಗ ನಡೆದಿದ್ದು ಡಿಸಿಜಿಐ ಸೋಂಕಿತರ ಬಳಕೆಗೆ ಅನುಮತಿ ನೀಡಿದೆ.