ಬೆಂಗಳೂರು, ಫೆ 09 (DaijiworldNews/KP): ಈಗ ಹಿಜಾಬ್ ಧರಿಸಲು ಅನುಮತಿ ಕೇಳಿದ್ದಾರೆ, ಮುಂದೆ ಶುಕ್ರವಾರದಂದು ಪರೀಕ್ಷೆ ಬೇಡ ಏನ್ನಬಹುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಸರ್ಕಾರ ಮಕ್ಕಳಿಗೆ ಹಿಜಾಜ್ ಧರಿಸಲು ಅವಕಾಶ ನೀಡಿದ್ದರೆ, ನಾಳೆಯ ದಿನ ಅವರು ಬಂದು ಶುಕ್ರವಾರ ನಮಾಜ್ ಮಾಡಲಿದೆ ಪರೀಕ್ಷೆ ಮಾಡಬೇಡಿ ಎಂದರೆ ನಡೆಸಿಕೊಡಲಾಗುವುದಿಲ್ಲ ಹಾಗಾಗಿ ನಾವು ಹಿಜಾಬ್ಗೆ ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕೋರ್ಟ್ ತೀರ್ಪು ಏನು ಬರುತ್ತದೆ ನೊಡೊಣ, ಆದರೆ ಯಾವುದೇ ಮಕ್ಕಳ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾಳಜಿ ಶಿಕ್ಷಣ ಇಲಾಖಿಗೆ ಇದೆ, ಹೀಗಾಗಿ ಸರ್ಕಾರದ ಸುತ್ತೋಲೆ ಈಗಲೂ ಚಾಲ್ತಿಯಲ್ಲಿದ್ದು, ಶಾಲೆಗೆ ಬರುವ ಎಲ್ಲ ಮಕ್ಕಳು 1995ರ ಕಾಯ್ದೆಯನ್ನು ಅನುಸಾರಿಸಬೇಕು ಎಂದರು.
ಇನ್ನು ಉಡುಪಿ ಮಕ್ಕಳಿಗೆ ಮನೆಯಲ್ಲಿಯೇ ಕುಳಿತುಕೊಂಡು, ಅವರ ಸಂಪ್ರದಾಯವನ್ನು ಪಾಲಿಸಿಕೊಂಡು ಶಿಕ್ಷಣ ಪಡೆಯುವ ಆಯ್ಕೆಯನ್ನು ವಿದ್ಯಾಸಂಸ್ಥೆ ನೀಡಿತ್ತು, ಆದರೆ ಮಕ್ಕಳು ಯಾರದೋ ಪ್ರಚೋದನೆಗೆ ಒಳಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ, ಇದರಲ್ಲಿ ಮಕ್ಕಳ ತಪ್ಪು ಏನು ಇಲ್ಲ ಕೆಲ ಕೆಲ ರಾಜಕೀಯ ಪಕ್ಷ ಹಾಗೂ ಸಂಘಟನೆಗಳು ತಮ್ಮ ಲಾಭಕ್ಕಾಗಿ ಬಳಸಿಕೊಂಡು ವಿವಾದವನ್ನು ಹಬ್ಬಿಸುತ್ತಿದ್ದಾರೆ ಎಂದರು.