ದೆಹಲಿ, ಫೆ 09 (DaijiworldNews/KP): ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುವುದರ ಜೊತೆಗೆ ಅತ್ಯಾಚಾರಕ್ಕೆ ಪ್ರಚೋದನೆ ನೀಡಿದಂತಾಗುತ್ತದೆ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಹಿಳೆಯರು ಬಿಕಿನಿ ಹಾಕವುದು ಅವರ ಮೂಲಭೂತ ಹಕ್ಕು ಎಂಬ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೆಲವೊಮ್ಮೆ ಮಹಿಳೆಯರು ಧರಿಸುವ ಬಟ್ಟೆಯಿಂದ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ, ಅಲ್ಲದೆ ಕೆಲಮೊಮ್ಮೆ ಸಮಾಜದ ಅಹಿತಕರ ಘಟನೆ ಎಂದರೆ ಅತ್ಯಾಚಾರಕ್ಕೂ ಪ್ರಚೋದನೆ ನೀಡಿತ್ತದೆ. ಇಂತಹ ಕೀಳು ಮಟ್ಟದ ಹೇಳಿಕೆ ನೀಡಿದ ಪ್ರಿಯಾಂಕ ಗಾಂಧಿ ದೇಶದ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದರು.
ಪ್ರತಿಯೊಬ್ಬರು ಭಾರತ ಮಾತೆ ಮಕ್ಕಳು. ಹೀಗಾಗಿ ನಾವೆಲ್ಲಾ ಒಂದೇ ತಾಯಿಯ ಮಕ್ಕಳು ಎಂದರ್ಥ. ಎಲ್ಲಾ ಅಲ್ಪ ಸಂಖ್ಯಾತರು ಕೆಟ್ಟವರಲ್ಲ ಅವರಿಗೂ ಶಿಕ್ಷಣದಲ್ಲಿ ಸಮಾನತೆ ಸಿಗಬೇಕು ಎಂದರು.
ಇನ್ನು ಶಿಕ್ಷಣದಿಂದ ಯಾರು ವಂಚಿತರಾಗಬಾರದು, ಬಿಜೆಪಿಯವರು ರಾಜಕಾರಣದಲ್ಲಿ ನಾವು ಕೇಸರೀಕರಣ ಮಾಡುತ್ತೇವೆ. ಆದರ ಶಿಕ್ಷಣದಲ್ಲಿ ನಾವು ಕೇಸರೀಕರಣ ಮಾಡುವುದಿಲ್ಲ, ಆದರೆ ಕೆಲ ಕಾಂಗ್ರೆಸ್ನವರು ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಅಲ್ಪಸಂಖ್ಯಾತರನ್ನು ಬಳಕೆ ಮಾಡುತ್ತಿದ್ದಾರೆ ಎಂದು ಶಾಸಕರು ಹೇಳಿದರು.