ಬೆಂಗಳೂರು, ಫೆ 09 (DaijiworldNews/KP): ಮಂಡ್ಯದಲ್ಲಿ ಹುಡುಗರ ಮುಂದೆ 'ಅಲ್ಲಾಹು ಅಕ್ಬರ್' ಎಂದು ಘೋಷಣೆ ಕೂಗಿದ ಪಿಇಎಸ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿ ಮುಸ್ಕಾನ್ ಖಾನ್ಗೆ ಜಮಾತ್ ಉಲೆಮಾ-ಎ-ಹಿಂದ್ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ.
ಸಾಂದಾರ್ಭಿಕ ಚಿತ್ರ
ಹಿಜಾಜ್-ಕೇಸರಿ ವಿವಾದ ತಾರಕಕ್ಕೇರಿ ಒಂದು ಕಡೆ ಕಾಲೇಜಿನಲ್ಲಿ ಹುಡುಗರು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತಿದ್ದಾಗ ಅವರನ್ನೇ ನೋಡುತ ಮುಸ್ಕಾನ್ 'ಅಲ್ಲಾಹು ಅಕ್ಬರ್' ಎಂದು ಕೂಗಿದ್ದರು.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ ಬೆನ್ನಲ್ಲೇ ಜಮಾತ್ ಉಲೆಮಾ-ಎ-ಹಿಂದ್ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.
ಇನ್ನು ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿರುವ ಮುಸ್ಕಾನ್ ಖಾನ್, ನಾನು ಎಂದಿನಂತೆ ಬುರ್ಕಾ ಧರಿಸಿ ಕಾಲೇಜು ಪ್ರವೇಶಿಸಿದೆ. ಈ ವೇಳೆ ಗುಂಪೊಂದು 'ಜೈ ಶ್ರೀರಾಮ್' ಎಂದು ಘೋಷಣೆ ಕೂಗುತಿತ್ತು ಅದಕ್ಕೆ ಪ್ರತಿಯಾಗಿ 'ಅಲ್ಲಾಹು ಅಕ್ಬರ್' ಎಂದು ಕೂಗಿದೆ ಎಂದರು.
ಇನ್ನು ಆ ಗುಂಪಿನಲ್ಲಿದ್ದವರಲ್ಲಿ ಕೇವಲ ಶೇ.10ರಷ್ಟು ಮಂದಿ ಮಾತ್ರ ನಮ್ಮ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಬಾಕಿ ಉಳಿದವರು ಹೊರಗಡೆಯಿಂದ ಬಂದವರಾಗಿದ್ದರು ಎಂದು ಹೇಳಿದರು.