ಧಾರವಾಡ, ಫೆ 09 (DaijiworldNews/KP): ವಿದ್ಯಾರ್ಥಿಗಳ ಮನಸಿನಲ್ಲಿ ಸಮಾನತೆ ಮತ್ತು ಸೌಹಾರ್ದತೆ ಭಾವ ಬೆಳೆಸುವ ನಿಟ್ಟಿನಲ್ಲಿ ಸಮವಸ್ತ್ರ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ವಿದ್ಯಾರ್ಥಿನಿಯರಿಗೆ ಹಿಜಾಜ್ ಅಥವಾ ಬಿಕಿನಿ ಧರಿಸುವ ಸ್ವಾತ್ರಂತ್ಯವಿದೆ ಎಂಬ ಪ್ರಿಯಾಂಕ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಉನ್ನತ ಸ್ಥಾನದಲ್ಲಿರುವ ನೀವು ಒಬ್ಬ ವಿದ್ಯಾರ್ಥಿನಿಯರಿಗೆ ಬಿಕಿನಿ ಹಾಕುವ ಅವಕಾಶ ಮಾಡಿಕೊಡುತ್ತೀರಾ? ಬಿಕಿನಿ ಧರಿಸುವ ಹಕ್ಕು ನೀಡಿದರೆ ವಿದ್ಯಾರ್ಥಿಗಳ ನಡುವೆ ಸಮಾನತೆ ಸೃಷ್ಟಿಯಾಗುವುದೆ, ಇಂತಹ ಬೇಜವಾಬ್ದಾರಿ ಹೇಳಿಕೆ ನೀಡವ ಮುನ್ನ ಹಲವು ಬಾರಿ ಯೋಚಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಮನಸಿನಲ್ಲಿ ಸಮಾನತೆಯ ಭಾವ ಮೂಡಿಸುವ ಉದ್ದೇಶದಿಂದ ಸಮವಸ್ತ್ರ ಸಂಹಿತೆ ನಿಯಮವನ್ನು ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ಅವರು ಜಾರಿಗೆ ತಂದಿರುವುದು, ಈ ತರ ಹೇಳಿಕೆ ಕೊಡುವ ಮುನ್ನ ಸಮಾಜಕ್ಕೆ ಆಗುವ ಪರಿಣಾಮವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು