ನವದೆಹಲಿ, ಫೆ 09 (DaijiworldNews/MS): ಹಿಜಾಬ್ ಕುರಿತು ಎದ್ದಿರುವ ವಿವಾದ ರಾಷ್ಟ್ರಮಟ್ಟದಲ್ಲಿ ಪ್ರತಿದ್ವನಿಸುತ್ತಿದೆ. ಈ ಕುರಿತಂತೆ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಯಾವ ಬಟ್ಟೆ ಧರಿಸಬೇಕೆಂಬ ನಿರ್ಧರಿಸುವ ಹಕ್ಕು ಇದೆ, ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವುದು ನಿಲ್ಲಿಸಿ ಎಂದು ಹೇಳಿದ್ದಾರೆ.
ಯಾವ ಬಟ್ಟೆ ಧರಿಸಬೇಕು ಎಂದು ಎನ್ನುವುದು ಹೆಣ್ಣು ಮಕ್ಕಳ ವಿವೇಚನೆಗೆ ಬಿಟ್ಟಿದ್ದು. ಅದು ಬಿಕಿನಿಯಾಗಿರಲಿ, ಘೂಂಘಾಟ್ (ಶಿರವಸ್ತ್ರ) ಆಗಿರಲಿ, ಜೀನ್ಸ್ ಆಗಿರಲಿ ಅಥವಾ ಹಿಜಾಬ್ ಆಗಿರಲಿ, ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು.
ಹೆಣ್ಣುಮಕ್ಕಳು ಏನು ಧರಿಸಬೇಕು ಎಂಬುದನ್ನು ನಿರ್ಧರಿಸುವ ಅವರಿಗೆ ಇದೆ. ಈ ಹಕ್ಕು ಭಾರತೀಯ ಸಂವಿಧಾನ ನೀಡಿದೆ. ಮೊದಲು ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.