ಮಧ್ಯಪ್ರದೇಶ, ಫೆ 08 (DaijiworldNews/KP): ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಹಿಜಾಜ್ ಧರಿಸುವ ವಿವಾದವು ಉದ್ವಿಗ್ನವಾಗಿರುವ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿರುವ ಆಡಳಿತ ಪಕ್ಷವಾದ ಬಿಜೆಪಿ ಸರ್ಕಾರ ಹಿಜಾಬ್ ಅನ್ನು ನಿಷೇಧಿಸಲು ಸಿದ್ದತೆ ನಡೆಸುತ್ತಿದೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಧ್ಯಪ್ರದೇಶದ ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರು, ಯಾರಾದರೂ ಹಿಜಾಬ್ ಧರಿಸಿ ಶಾಲೆಗೆ ಬಂದರೆ ಅವರನ್ನು ನಿಷೇಧಿಸಲಾಗುವುದು, ಸಂಪ್ರದಾಯವನ್ನು ಪಾಲಿಸುವ ಜನರು ತಮ್ಮ ಮನೆಯವರೆಗೂ ಪಾಲಿಸಬೇಕು ಎಂಬುದು ಭಾರತದ ನಂಬಿಕೆಯಾಗಿದೆ, ಆದರೆ ಆದು ಶಾಲೆಗಳಿಗೆ ಅನ್ವಯವಾಗುವುದಿಲ್ಲ ಎಂದು ಹೇಳಿದರು.
ಹಿಜಾಬ್ ಶಾಲಾ ಸಮವಸ್ತ್ರ ಸಂಹಿತೆಯ ಭಾಗವಲ್ಲ, ಎಲ್ಲ ವಿದ್ಯಾರ್ಥಿಗಳು ಏಕರೂಪ ಸಂಹಿತೆಯನ್ನು ಅನುಸರಿಸಬೇಕು ಅದನ್ನು ಬಿಟ್ಟು ಯಾರಾದರೂ ಹಿಜಾಬ್ ಧರಿಸಿ ಶಾಲೆಗೆ ಬಂದರೆ ಅವರ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದರು.