ಬೆಂಗಳೂರು, ಫೆ 08 (DaijiworldNews/MS): ಮಕ್ಕಳ ಮನಸ್ಸಿನಲ್ಲಿ ವಿಷ ಬಿಜ ಬಿತ್ತುವುದು ಬೇಡ. ಕೋರ್ಟ್ ನೀಡುವ ಆದೇಶಕ್ಕೆ ತಲೆ ಬಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿವಾದದ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಬಿಜೆಪಿ ಪಕ್ಷದ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಸಚಿವರ ರಾಜಕೀಯ, ಬಿಜೆಪಿ ರಾಜಕೀಯ, ಸಂಘಪರಿವಾರದ ರಾಜಕೀಯ, ಕಾಂಗ್ರೆಸ್ ರಾಜಕೀಯ, ಎಸ್ಡಿಪಿಐ ರಾಜಕೀಯ ಇವೆಲ್ಲ ಈಗ ಬೇಡ. ಮಕ್ಕಳ ಮನಸ್ಸಿನಲ್ಲಿ ವಿಷ ಬಿಜ ಬಿತ್ತುವುದು ಬೇಡ ನ್ಯಾಯಾಲದ ತೀರ್ಪಿಗೆ ತಲೆಬಾಗಬೇಕು ಎಂದು ಶಿವಕುಮಾರ್ ಹೇಳಿದ್ದಾರೆ
ಯಾರ ಹೇಳಿಕೆಗೂ ನಾನು ಉತ್ತರ ಕೊಡಲು ಹೋಗುವುದಿಲ್ಲ. ಯಾರ್ ಯಾರ್ ರಾಜಕಾರಣ ಮಾಡಕೋಬೇಕು. ಯಾರ್ ಯಾರ್ ಸೀಮೆ ಎಣ್ಣೆ ಹಾಕೋಬೇಕು. ಯಾರ್ ಯಾರ್ ಎಷ್ಟೆಷ್ಟು ಶಾಲುಗಳಿಗೆ ಆರ್ಡರ್ ಕೊಟ್ಟಿದ್ದಾರೆ ಎಂದು ಗೊತ್ತಿದೆ ಎಂದಿದ್ದಾರೆ.
ಕಾಲೇಜಿನಲ್ಲಿ ಕೇಸರಿ ಧ್ವಜ ಹಾರಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಂದು ಅತ್ಯಂತ ದುಃಖದ ದಿನ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗಿನಿಂದ ಹಿಡಿದು ನನ್ನ 44 ವರ್ಷದ ಜೀವನದಲ್ಲಿ ಇಂದು ದುಃಖದ ದಿನವಾಗಿದೆ.
ಶಿವಮೊಗ್ಗದಲ್ಲಿ ರಾಷ್ಟ್ರದ ಧ್ವಜ ಕೆಳಗೆ ಇಳಿಸಿ ಕೇಸರಿ ಧ್ವಜ ಹಾರಿಸಿರುವುದು ಸರಿ ಅಲ್ಲ, ನಮ್ಮ ರಾಷ್ಟ್ರಧ್ವಜ ಕೆಳಗೆ ಇಳಿಯುವುದನ್ನ ನೋಡಿ ನನಗೆ ಸಹಿಸಲಾಗಲಿಲ್ಲ. ಕೇಸರಿ ಬಗ್ಗೆ ಎಲ್ಲರಿಗೂ ಗೌರವ ಇದೆ. ನಮ್ಮ ರಾಷ್ಟ್ರಧ್ವಜದಲ್ಲೇ ಕೇಸರಿ ಇದೆ. ಹೀಗಿರುವಾಗ ರಾಷ್ಟ್ರಧ್ವಜ ಕೆಳಗಿಳಿಸಿ ಕೇಸರಿಧ್ವಜ ಹಾರಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.