ನವದೆಹಲಿ, ಫೆ 08 (DaijiworldNews/MS): ಪ್ರಸ್ತಿದ್ದವಾದ ಮಹಾಭಾರತ ಧಾರವಾಹಿಯಲ್ಲಿ ಭೀಮನ ಪಾತ್ರವನ್ನ ನಿರ್ವಹಿಸಿದ್ದ ಪ್ರವೀಣ್ ಕುಮಾರ್ ಸೋಬ್ತಿ ಅವರು 74 ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಅಜಾನುಭಾಹು ಶರೀರ, ಕಟ್ಟು ಮಸ್ತಾದ ಮೈಕಟ್ಟಿಗೆ ಹೆಸರುವಾಸಿಯಾಗಿರುವ ಪ್ರವೀಣ್ ಅನೇಕ ಬಾಲಿವುಡ್ ಚಲನಚಿತ್ರಗಳಲ್ಲಿ ಹೆಂಚ್ಮ್ಯಾನ್, ಗೂಂಡಾ ಮತ್ತು ಅಂಗರಕ್ಷಕನ ಪಾತ್ರವನ್ನು ನಿರ್ವಹಿಸಿದ್ದಾರೆ.
ನಟ ಮಾತ್ರವಲ್ಲ ಇವರೊಬ್ಬ ಉತ್ತಮ ಕ್ರೀಡಾಪಟುವಾಗಿದ್ದರು. ಪಂಜಾಬ್ ಮೂಲದವರಾದ ಇವರು 6’6 ಎತ್ತರ ಹೊಂದಿದ್ದು, ಹ್ಯಾಮರ್ ಮತ್ತು ಡಿಸ್ಕಸ್ ಥ್ರೋ ಅಥ್ಲೀಟ್ ಆಗಿದ್ದರು. ಅವರು ನಾಲ್ಕು ಬಾರಿ ಏಷ್ಯನ್ ಗೇಮ್ಸ್ ಪದಕ ವಿಜೇತರಾಗಿದ್ದಾರೆ (2 ಚಿನ್ನ, 1 ಬೆಳ್ಳಿ ಮತ್ತು 1 ಕಂಚು) ಮತ್ತು ಎರಡು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ (1968 ಮೆಕ್ಸಿಕೋ ಗೇಮ್ಸ್ ಮತ್ತು 1972 ಮ್ಯೂನಿಚ್ ಗೇಮ್ಸ್) ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು ಅರ್ಜುನ ಪ್ರಶಸ್ತಿ ಪುರಸ್ಕೃತರೂ ಹೌದು. ಕ್ರೀಡೆಯಿಂದಾಗಿ ಪ್ರವೀಣ್ಗೆ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಡೆಪ್ಯುಟಿ ಕಮಾಂಡೆಂಟ್ ಹುದ್ದೆ ಪಡೆದುಕೊಂಡಿದ್ದರು.
ಕ್ರೀಡಾ ಜೀವನದ ಯಶಸ್ವಿನ ನಂತರ ಪ್ರವೀಣ್ ಅವರು ಪಂದ್ಯಾವಳಿಗಾಗಿ ಕಾಶ್ಮೀರದಲ್ಲಿದ್ದಾಗ ತಮ್ಮ ಮೊದಲ ಬಾಲಿವುಡ್ ಚಿತ್ರಕ್ಕೆ ಸಹಿ ಹಾಕಿದ್ದರು. ರವಿಕಾಂತ್ ನಾಗೈಚ್ ನಿರ್ದೇಶನದಲ್ಲಿ ಅವರ ಸಂಭಾಷಣೆ ಇಲ್ಲದ ಮೊದಲ ಪಾತ್ರ ಮಾಡಿದ್ದರು.80ರ ದಶಕದಲ್ಲಿ ಬಿಆರ್ ಚೋಪ್ರಾ ನಿರ್ದೇಶನದ ಮಹಾಭಾರತ ಧಾರವಾಹಿಯಲ್ಲಿ ಭೀಮ ಪಾತ್ರದಲ್ಲಿ ಮಿಂಚಿದ್ದರು. ಇವರ ಪಾತ್ರ ಜನಮಾನಸದಲ್ಲಿ ಇಂದು ಅಚ್ಚಳಿಯದೆ ಮನೆಮಾಡಿದೆ.