ನವದೆಹಲಿ, ಫೆ 08 (DaijiworldNews/HR): ಕರ್ನಾಟಕದ ರಾಜಕೀಯ ಪಕ್ಷಗಳು 2023ರ ವಿಧಾನಸಭಾ ಚುನಾವಣೆಗೆ 'ಹಿಜಾಬ್' ವಿಷಯದ ಲಾಭ ಪಡೆಯುತ್ತಿವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಕೆಲವು ಅಂಶಗಳು ನಡೆಯುತ್ತಿದ್ದು, ರಾಜಕೀಯ ಪಕ್ಷಗಳು 2023ರ ಚುನಾವಣೆಗಳ ಲಾಭವನ್ನು ಪಡೆಯುತ್ತಿವೆ.ಸರ್ಕಾರ ಇದನ್ನು ನಿಲ್ಲಿಸಬಹುದು ಎಂದಿದ್ದಾರೆ.
ಇನ್ನು ಫೆಬ್ರವರಿ 4 ರಂದು ಉಡುಪಿ ಜಿಲ್ಲೆಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಹಿಜಾಬ್ ಪ್ರತಿಭಟನೆಗಳು ಪ್ರಾರಂಭವಾಗಿದ್ದು, ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿದ್ದರಿಂದ ತರಗತಿಗಳಿಗೆ ಹಾಜರಾಗದಂತೆ ನಿರ್ಬಂಧಿಸಲಾಗಿದೆ.