ವಿಜಯಪುರ, ಫೆ 07 (DaijiworldNews/HR): ನನಗೆ ಗೃಹ ಸಚಿವರ ಖಾತೆ ಕೊಟ್ಟರೇ ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಅಂತ್ಯ ಹಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾನು ಎಲ್ಲಿಯೂ ಸಚಿವ ಸ್ಥಾನ ಇದೇ ಕೊಡಿ, ಅದೇ ಕೊಡಿ ಅಂತ ಕೇಳಿಲ್ಲ. ಸಂಪುಟ ವಿಸ್ತರಣೆ ಆದರೆ ಯಾವುದಾದರೂ ಖಾತೆ ಕೊಡಲಿ. ಒಂದು ವೇಳೆ ಗೃಹ ಸಚಿವರ ಖಾತೆ ಕೊಟ್ಟರೇ ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಅಂತ್ಯ ಹಾಡುತ್ತೇನೆ ಎಂದರು.
ಇನ್ನು ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವಿದೆ. ಇಲ್ಲಿ ದೇಶಭಕ್ತಿಗೆ ಮಾತ್ರವೇ ಅವಕಾಶ. ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಪ್ರದಾಯಕ್ಕೆ ಅವಕಾಶವಿಲ್ಲ. ಯುವ ಜನರು ಜಾಗೃತರಾಗಬೇಕು. ಎಲ್ಲಾ ಕಾಲೇಜಿನಲ್ಲಿ ವಸ್ತ್ರ ಸಂಹಿತೆ ಪಾಲಿಸಬೇಕು ಎಂದು ಹೇಳಿದ್ದಾರೆ.