ಬಿಜ್ನೋರ್, ಫೆ 07 (DaijiworldNews/MS): ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸಬೇಕಿದ್ದ ಬಿಜ್ನೋರ್ ರ್ಯಾಲಿಯನ್ನು ರದ್ದುಗಳಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ. ಈ ವಿಚಾರವಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಮಿತ್ರ , ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ ಬಿಜೆಪಿಯನ್ನು ಲೇವಡಿ ಮಾಡಿದ್ದಾರೆ.
‘ಬಿಜ್ನೋರ್ನಲ್ಲಿ ಇಂದು ಬಿಸಿಲಿದೆ. ಆದರೆ, ಬಿಜೆಪಿಗೆ ಮಾತ್ರ ಹವಾಮಾನವು ಕೆಟ್ಟಿದೆ’ ಎಂದು ಚೌಧರಿ ವ್ಯಂಗವಾಡಿದ್ದಾರೆ. "ಬಿಜ್ನೋರ್ನಲ್ಲಿ ಉತ್ತಮ ವಿದ್ಯುತ್ ಮತ್ತು ಅಭಿವೃದ್ಧಿಯ ಭರವಸೆಯನ್ನು ಬಿಜೆಪಿ ಹಿಂದೆ ನೀಡಿತ್ತು. ಇಂದು ಪ್ರಧಾನಿ ಅವರನ್ನು ಭೇಟಿ ಮಾಡಿದ್ದರೆ, ಜನರು ಪ್ರಶ್ನೆಗಳನ್ನುಎಸೆಯುತ್ತಿದ್ದರು. ಆದ್ದರಿಂದ ಇದ್ದಕ್ಕಿದ್ದಂತೆ ಬಿಜೆಪಿಯ ಹವಾಮಾನ ಕೆಟ್ಟಿತು. ಬಿಜೆಪಿಯು ತಮ್ಮ ಭರವಸೆಗಳನ್ನು ಈಡೇರಿಸಲು ವಿಫಲವಾದ ನಂತರ ಜನರನ್ನು ಎದುರಿಸಲು ಸಿದ್ಧವಾಗಿಲ್ಲ" ಮೀರತ್ ಕಂಟೋನ್ಮೆಂಟ್ನಲ್ಲಿ ನಡೆದ ರ್ಯಾಲಿಯಲ್ಲಿ ಅವರು ಹೇಳಿದ್ದಾರೆ.
ಇದಲ್ಲದೆ ಟ್ವೀಟ್ ಮಾಡಿರುವ ಅವರು ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿ ರ್ಯಾಲಿಯು ರದ್ದಾಗಿದ್ದರ ಬಗೆಗಿನ ಸುದ್ದಿ ಮೊದಲನೆಯ ಚಿತ್ರದಲ್ಲಿದೆ. ಎರಡನೆಯದರಲ್ಲಿ, ಬಿಜ್ನೋರ್ ಹವಾಮಾನದ ಕುರಿತ ಗೂಗಲ್ ಸ್ಕ್ರೀನ್ಶಾಟ್ ಇದೆ. ಇದರಲ್ಲಿ ಬಿಜ್ನೋರ್ನ ತಾಪಮಾನವು 17 ಡಿಗ್ರಿ ಎಂದು ತೋರಿಸುತ್ತಿದೆ.
ಉತ್ತರ ಪ್ರದೇಶದಲ್ಲಿ ಈ ತಿಂಗಳು ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಸಮಾಜವಾದಿ ಪಕ್ಷದೊಂದಿಗೆ ರಾಷ್ಟ್ರೀಯ ಲೋಕದಳ ಮೈತ್ರಿ ಮಾಡಿಕೊಂಡಿದೆ. ರಾಷ್ಟ್ರೀಯ ಲೋಕದಳವು ಪಶ್ಚಿಮ ಯುಪಿಯಲ್ಲಿ ಉತ್ತಮ ಹೊಂದಿದೆ.