ಇಟಾನಗರ, ಫೆ 07 (DaijiworldNews/HR): ಭಾರತೀಯ ಸೇನಾ ಗಸ್ತು ಪಡೆಯ ಕನಿಷ್ಠ ಏಳು ಸೇನಾ ಸಿಬ್ಬಂದಿ ಹಿಮದಡಿ ಸಿಲುಕಿಕೊಂಡಿರುವ ಘಟನೆ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಕಮೆಂಗ್ ಸೆಕ್ಟರ್ನ ಎತ್ತರದ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸೇನೆ ಶೋಧ ಮತ್ತು ರಕ್ಷಣಾ ತಂಡಗಳನ್ನ ಸ್ಥಳಕ್ಕೆ ಏರ್ ಲಿಫ್ಟ್ ಮಾಡಿದೆ. ಇನ್ನು ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ಮುಂದುವರೆದಿದೆ.
ಇನ್ನು ಹಿಮಪಾತದಿಂದ ಹಾನಿಗೊಳಗಾದ ಸೇನಾ ಗಸ್ತು ಪಡೆ ರಕ್ಷಿಸಲು ಅರುಣಾಚಲ ಪ್ರದೇಶದ ಕಮೆಂಗ್ ಸೆಕ್ಟರ್ʼನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಹಿಮಪಾತದೊಂದಿಗೆ ಅಸಹನೀಯ ಹವಾಮಾನವಿದೆ ಎಂದು ಭಾರತೀಯ ಸೇನೆ ತಿಳಿಸಿದೆ.