ನವದೆಹಲಿ, ಫೆ 07 (DaijiworldNews/KP): ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿ ರೋಹ್ಟಕ್ನ ಸುನಾರಿಯಾ ಜೈಲು ಸೇರಿ ಜೀವಾವಧಿ ಶಿಕ್ಷೆ ನುಭವಿಸುತ್ತಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ಹರಿಯಾಣ ಸರ್ಕಾರದ ಜೈಲು ಆಡಳಿತವು ಫೆಬ್ರವರಿ 7ರಿಂದ 21 ದಿನಗಳವರೆಗೂ ತಾತ್ಕಾಲಿಕವಾಗಿ ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಸುಮಾರು ಎರಡು ದಶಕಗಳ ಹಿಂದೆ ತನ್ನ ಮ್ಯಾನೇಜರ್ ರಂಜಿತ್ ಸಿಂಗ್ ಹತ್ಯೆಗಾಗಿ ಅಕ್ಟೋಬರ್ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಮಹಿಳೆಯರ ಮೇಲಿನ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದ, ಗುರ್ಮೀತ್ ರಾಮ್ ರಹೀಮ್ ಸಿಂಗ್ 21 ದಿನಗಳ ಅವಧಿಗೆ ತಾತ್ಕಾಲಿಕವಾಗಿ ಬಿಡುಗಡೆಯಾಗಿರುವ ಇವರು ಇಂದು ಸಂಜೆ ಹರಿರ್ಯಾಣದ ರೋಹ್ಟಕ್ನ ಸುನಾರಿಯಾ ಜೈಲಿನಿಂದ ಹೊರ ಬರುವ ನಿರೀಕ್ಷೆಯಿದೆ.
ಸೋಮವಾರ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ಬಿಡುಗಡೆಯಾದ ಬಳಿಕ ಸಿರ್ಸಾದಲ್ಲಿರುವ ಸಂಘಟನೆಯ ಪ್ರಧಾನ ಕಚೇರಿಗೆ ತೆರಳುವ ನಿರೀಕ್ಷೆಯಿದೆ. ಈ ಹಿಂದೆ ವೈದ್ಯಕೀಯ ತಪಾಸಣೆ ಮತ್ತು ತಾಯಿಯನ್ನು ಭೇಟಿಯಾಗಲು ಸೇರಿದಂತೆ ವಿವಿಧ ಕಾರಣಗಳಿಗಾಗಿ ಅವರು ಮೂರು ಬಾರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜೈಲು ಕೈದಿಗಳಿಗೆ ಪೆರೋಲ್ ಅಥವಾ ಫರ್ಲೋ ನೀಡುವುದಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹರಿಯಾಣದ ವಿದ್ಯುತ್ ಸಚಿವ ರಂಜಿತ್ ಸಿಂಗ್ ಮಾಹಿತಿ ನೀಡಿದ್ದಾರೆ. ಇದು ಅಪರಾಧಿಯ ಕಾನೂನು ಹಕ್ಕು, ಅವನು ಮೂರು ವರ್ಷಗಳ ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ಪೆರೋಲ್ ಅಥವಾ ಫರ್ಲೋ ಪಡೆಯಲು ಅರ್ಹನಾಗುತ್ತಾನೆ. ಇತರ ಕೈದಿಗಳಂತೆ ಗುರ್ಮೀತ್ ರಾಮ್ ರಹೀಮ್ ಅವರ ಕೋರಿಕೆಯ ಅರ್ಜಿಯನ್ನು ಸಮಿತಿಯು ಪರಿಶೀಲಿಸಿತು ಮತ್ತು ಅವರ ಕೋರಿಕೆಯನ್ನು ಅನುಮತಿಸಲಾಗಿದೆ ಎಂದು ಸಚಿವರು ಹೇಳಿದರು.
ಡೇರಾ ಅನುಯಾಯಿಗಳು ಹಾಗೂ ರಹೀಮ್ ಸಿಂಗ್ ಅನುಯಾಯಿಗಳು ಪಂಜಾಬ್ನ ಮಾಲ್ವಾ ಪ್ರದೇಶದಲ್ಲಿ ಹೆಚ್ಚಿದ್ದು, ಪಂಜಾಬ್ ಮತ್ತು ಉತ್ತರ ಪ್ರದೇಶದ ಸಂಸದೀಯ ಮತ್ತು ಶಾಸಕಾಂಗ ಚುನಾವಣೆಗಳ ಫಲಿತಾಂಶವನ್ನು ನಿರ್ಧರಿಸುವಲ್ಲಿ ಅವರ ಮತ ಇದಾಗಿದೆ.