ಮೈಸೂರು, ಫೆ 07 (DaijiworldNews/HR): ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸಿಯೇ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವುದು ಈ ಹಿಂದಿನಿಂದಲೂ ನಡೆದುಕೊಂಡು ಬರ್ತಾ ಇದೆ. ಆದರೆ ಈಗ ರಾಜಕೀಯ ಪಿತೂರಿಗೆ ಹಿಜಾಬ್ ವಿವಾದವಾಗಿ ಎದ್ದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಹಿಜಾಬ್ ವಿವಾದದ ಹಿಂದೆ ರಾಜಕೀಯ ಪ್ರಚೋದನೆಯ ಪಿತೂರಿ ಇದೆ. ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು ಧರಿಸಿ ಬಂದ್ರೆ ತರಗತಿ ಇಲ್ಲ. ಸಮವಸ್ತ್ರ ಧರಿಸಿಯೇ ಬರಬೇಕು ಎಂದಿದ್ದಾರೆ.
ಶಾಲಾ ವಾತಾವರಣದಲ್ಲಿ ಸಮವಸ್ತ್ರ ಹಿಂದಿನಿಂದಲೂ ಧರಿಸಿ ಬರಲಾಗುತ್ತಿದ್ದು, ಯಾವುದೇ ಧಾರ್ಮಿಕ ಉಡುಪು ಧರಿಸಿ ಬರೋದನ್ನು ಕಂಡಿಲ್ಲ. ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶಾದ್ಯಂತವೂ ಇದೇ ನಿಯಮವಿದೆ ಎಂದರು.
ರಾಜಕೀಯ ಪಿತೂರಿ, ರಾಜಕೀಯ ನಾಯಕರ ಪ್ರಚೋದನೆಯಿಂದಾಗಿ ಈಗ ಹಿಜಾಬ್ ವಿವಾದ ತಾರಕಕ್ಕೇರಿದೆ. ವಿದ್ಯಾರ್ಥಿಗಳು ಪ್ರಚೋದನೆಗೆ ಒಳಗಾಗಬಾರದು. ಈ ಹಿಂದೆ ಬರ್ತಾ ಇದ್ದಂತೆ ಸಮವಸ್ತ್ರ ಧರಿಸಿ ತರಗತಿಗೆ ಹಾಜರಾಗಬೇಕು ಎಂದು ಹೇಳಿದ್ದಾರೆ.