ಹುಣಸೂರು, ಫೆ 07 (DaijiworldNews/HR): ಹೋಟೆಲ್ಗೆ ತಿಂಡಿ ತಿನ್ನಲು ಬಂದಿದ್ದ ಎಲ್ಎಲ್ಬಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತಪಟ್ಟ ಯುವಕನನ್ನು ಹುಣಸೂರು ತಾಲೂಕಿನ ನಂಜಾಪುರ ಗ್ರಾಮದ ನಟರಾಜ್ ಅವರ ಪುತ್ರ ನಿತಿನ್(25) ಎಂದು ಗುರುತಿಸಲಾಗಿದೆ.
ಸ್ನೇಹಿತನೊಂದಿಗೆ ನಿತಿನ್ ತಿಂಡಿ ತಿನ್ನಲು ಹುಣಸೂರಲ್ಲಿರುವ ಹೋಟೆಲ್ ಗೆ ತೆರಳಿ ತಿಂಡಿಗೆ ಆರ್ಡರ್ ಮಾಡಿದ್ದಾರೆ. ತಿಂಡಿ ಬರುವಷ್ಟರಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದ ನಿತಿನ್ ನನ್ನು ಸ್ನೇಹಿತ ಹಾಗೂ ಹೋಟೆಲ್ ನವರು ಉಪಚರಿಸಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗುವಷ್ಟರಲ್ಲಾಗಲೆ ನಿತಿನ್ ಸಾವನ್ನಪ್ಪಿದ್ದಾರೆ.
ಇನ್ನು ಯುವಕ ಹೋಟೆಲ್ ನಲ್ಲಿದ್ದ ಕೊನೆ ಕ್ಷಣದ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.