ನವದೆಹಲಿ, ಫೆ 07 (DaijiworldNews/KP): ಇನ್ನು ಮುಂದೆ ನನ್ನ ನಿಷ್ಟೆ ಏನಿದ್ದರೂ ರಾಜ್ಯ ಸೇವೆಗಾಗಿ ಮಾತ್ರ, ನಾನಗಲಿ ನನ್ನ ಪತ್ನಿಯಾಗಲಿ ಯಾವುದೇ ಆಸ್ತಿಯನ್ನು ಖರೀದಿಸುವುದಿಲ್ಲ ಹಾಗೂ ಯಾವುದೇ ಅಕ್ರಮ ವ್ಯವಹಾರವನ್ನು ನಡೆಸುವುದಿಲ್ಲ ಎಂದು ಪಂಜಾಬ್ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಆಭ್ಯರ್ಥಿ ಚರಂಜಿತ್ ಸಿಂಗ್ ಚನ್ನಿ ಹೇಳಿದರು.
ಭಾನುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚನ್ನಿ ಅವರನ್ನು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ್ದರು ಈ ವೇಳೆ ಮಾತನಾಡಿದ ಅವರು, ಇಷ್ಟು ದೊಡ್ಡ ಹೋರಾಟ ಮತ್ತು ಕೆಲಸವನ್ನು ನಾನೊಬ್ಬನೆ ಮಾಡಲು ಸಾಧ್ಯವಿಲ್ಲ, ಈ ಚುನಾವಣೆಯಲ್ಲಿ ಹೋರಾಡಲು ನನ್ನ ಬಳಿ ಹಣ ಮತ್ತು ಧೈರ್ಯವಿಲ್ಲ, ಆದರೆ ಜನರ ಏಳಿಗೆಗಾಗಿ ನಾನು ಯಶಸ್ಸು ಸಿಗುವವರೆಗೂ ಹೋರಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಚನ್ನಿ, ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ರಾಹುಲ್ ಗಾಂಧಿ ಹಾಗೂ ಪಕ್ಷದ ನಾಯಕರಿಗೆ ಧನ್ಯವಾದ ಅರ್ಪಿಸಿದರು.
ಇನ್ನು ಮುಂದೆ ನಾನಗಲಿ ನನ್ನ ಹೆಂಡತಿಯಾಗಲಿ ಯಾವುದೇ ಆಸ್ತಿಯನ್ನು ಖರೀದಿಸುವುದಿಲ್ಲ ಹಾಗೂ ಯಾವುದೇ ಅಕ್ರಮ ವ್ಯವಹಾರವನ್ನು ನಡೆಸುವುದಿಲ್ಲ, ರಾಜ್ಯಕ್ಕಾಗಿ ನಿಷ್ಟೆಯಿಂದ ಸೇವೆ ಸಲ್ಲಿಸುತ್ತೇನೆ, ರಾಜ್ಯದ ಅಭಿವೃದ್ದಿಯೇ ನನ್ನ ಗುರಿ ಎಂದು ಚನ್ನಿ ಹೇಳಿದರು.
ಜಾರಿ ನಿರ್ದೇಶನಾಲಯವು ತಮ್ಮ ಸೋದರಳಿಯನನ್ನು ಬಂಧಿಸಿದ ನಂತರ ಪ್ರತಿಪಕ್ಷವಾದ ಆಮ್ ಆದ್ಮಿ ತನ್ನ ಇಮೇಜ್ ಅನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಧು, ರಾಹುಲ್ ಗಾಂಧಿ ಅವರ ನಿರ್ಧಾರವನ್ನು ನಾನು ಒಪ್ಪಿಕೊಂಡಿದ್ದೇನೆ. ನನಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಿದ್ದರು, ನಾನು ನನ್ನ ಕರ್ತವ್ಯ ಮುಗಿಸಿದ್ದೇನೆ, ಇನ್ನು ಮುಂದೆ ನನಗೆ ಅಧಿಕಾರ ನೀಡದಿದ್ದರೆ ಯಾರನ್ನು ಸಿಎಂ ಮಾಡುತ್ತಾರೋ ಅವರೊಂದಿಗೆ ನಗುಮೊಗದಿಂದ ನಡೆಯುತ್ತೇನೆ ಎಂದರು.