ಲೂದಿಯಾನ, ಫೆ. 06 (DaijiworldNews/SM): ಪಂಜಾಬ್ ವಿಧಾನಸಭಾ ಚುನಾವಣಾ ಕಾವು ಹೆಚ್ಚಾಗಿದೆ. ಈ ನಡುವೆ ಕಾಂಗ್ರೆಸ್ ನಿಂದ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಹಾಲಿ ಸಿಎಂ ಚರಣ್ ಜಿತ್ ಸಿಂಗ್ ಚನ್ನಿ ಅವರೇ ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಿಸಲಾಗಿದೆ.
ಈ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ರವಿವಾರದಂದು ಘೋಷಣೆ ಮಾಡಿದ್ದಾರೆ. 40 ವರ್ಷದ ಹಿಂದೆಯೇ ನವಜೋತ್ ಸಿಂಗ್ ಸಿಧು ಅವರನ್ನು ಭೇಟಿಯಾಗಿದ್ದೆ ಆದರೆ, ನಾನು ಅವರನ್ನು ಭೇಟಿಯಾಗಿರುವುದು ಅವರಿಗೆ ತಿಳಿದಿರಿಲ್ಲ. ಡೂನ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕ್ರಿಕೆಟ್ ಪಂದ್ಯವೊಂದನ್ನು ಅಡಲು ಸಿಧು ಬಂದಿದ್ದರು ಎಂದು ರಾಹುಲ್ ತಿಳಿಸಿದರು.