ನವದೆಹಲಿ, ಫೆ 06 (DaijiworldNews/HR): ಕಳೆದ ವರ್ಷ ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಯೋಧ ದೀಪಕ್ ಸಿಂಗ್ ಅವರ ಪತ್ನಿ ರೇಖಾ ದೇವಿ(23) ಅವರು ಪತಿಯ ಕನಸನ್ನು ನನಸು ಮಾಡುವುದಾಕ್ಕಾಗಿ ಸೇನೆಗೆ ಸೇರಿದ್ದಾರೆ.
2020ರಲ್ಲಿ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರ ವಿರುದ್ಧ ಹೋರಾಡುವ ವೇಳೆ ದೀಪಕ್ ಸಿಂಗ್ ಮೃತಪಟ್ಟಿದ್ದರು. ಅವರ ಸಾಹಸಕ್ಕೆ ಕೇಂದ್ರ ಸರ್ಕಾರ ಇತ್ತೀಚೆಗೆ ಅವರಿಗೆ ಮರಣೋತ್ತರ ವೀರ ಚಕ್ರ ನೀಡಿ ಗೌರವಿಸಿತ್ತು. ಈ ಗೌರವವನ್ನು ಅವರ ಪತ್ನಿ ರೇಖಾ ಪಡೆದುಕೊಂಡಿದ್ದರು.
ರೇಣಾ ಅವರು ಮೊದಲ ಹಂತದ ಕಠಿಣವಾದ ವ್ಯಕ್ತಿತ್ವ ಮತ್ತು ಗುಪ್ತಚರ ಪರೀಕ್ಷೆಯಲ್ಲಿ ರೇಖಾ ಉತ್ತೀರ್ಣರಾಗಿದ್ದು, ಮುಂಧಿನ ಹಂತದಲ್ಲಿ ಅವರು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಬಳಪಡಬೇಕಿದೆ. ಇದರಲ್ಲಿ ಉತ್ತೀರ್ಣರಾದರೆ ಚೆನ್ನೈನಲ್ಲಿರುವ ಆಫೀಸರ್ಗಳ ಬಳಿ ಟ್ರೈನಿಂಗ್ ಅಕಾಡೆಮಿಗೆ ಸೇರುವ ಅವಕಾಶ ಪಡೆಯಲಿದ್ದಾರೆ.