ಬೆಂಗಳೂರು, ಫೆ 06 (DaijiworldNews/KP): ನಗರದಲ್ಲಿ ಇತ್ತೀಚೆಗೆ ಮೂಕ ಪ್ರಾಣಿಗಳ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ, ಸಿದ್ದಾಪುರ ಠಾಣಾ ವ್ಯಾಪ್ಯಿಯ ಘಟನೆ ಮರೆಮಾಸುವ ಮೊದಲೇ ಕೂಕ್ ಟೌನ್ನ ಮೆಕ್ ಫರ್ಸನ್ ರಸ್ತೆಯಲ್ಲಿ ಅಂತಹದ್ದೇ ಅಹಿತಕರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತನ್ನ ಪಾಡಿಗೆ ಓಡಾಡಿಕೊಂಡಿದ್ದ ನಾಯಿಯ ಮೇಲೆ ಉದ್ದೇಶ ಪೂರ್ವಕವಾಗಿ ಅಪರಿಚಿತ ಕಾರೊಂದನ್ನು ಹತ್ತಿಸಿ, ಚಾಲಕ ಕಾರು ನಿಲ್ಲಿಸಿ ನಾಯಿಯನ್ನು ಪರಿಶಿಲಿಸದೇ ಅಮಾನವೀಯತೆ ಮೆರೆದ ಘಟನೆಯೊಂದು ಫೆ. 2 ರಂದು ರಾತ್ರಿ 9.40 ರ ಸುಮಾರಿಗೆ ಕಾಕ್ ಟೌನ್ನ ಮೆಕ್ ಫರ್ಸನ್ ರಸ್ತೆಯಲ್ಲಿ ನಡೆದಿದೆ .
ಇನ್ನು ನಾಯಿಯ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗಾಯಗೊಂಡಿದ್ದ ನಾಯಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಇದಕ್ಕೂ ಮೊದಲು ಸಿದ್ದಾಪುರದಲ್ಲಿ ಉದ್ಯಮಿ ಒಬ್ಬರ ಮೊಮ್ಮಗ ಆದಿಕೇಶವ ಮಲಗಿದ್ದ ಲಾರಾ ಎನ್ನುವ ಬೀದಿ ನಾಯಿಯ ಮೇಲೆ ಕಾರು ಹತ್ತಿಸಿದ್ದ, ಈ ಕುರಿತು ಸ್ಥಳೀಯರು ಸಿದ್ದಾಪುರ ಠಾಣೆಯಲ್ಲಿ ದೂರು ನೀಡಿದ್ದರು, ಪ್ರಕರಣದ ಆಧಾರ ಮೇಲೆ ಆರೋಪಿಯನ್ನು ಬಂಧಿಸಿದ್ದರು.