ಬೆಂಗಳೂರು, ಫೆ 06 (DaijiworldNews/HR): ಕರಾವಳಿ ಭಾಗದಲ್ಲಿ ಗೋ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಗೋರಕ್ಷಣಾ ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ಪತ್ರ ಬರೆದಿದ್ದಾರೆ.
ಆಯಾ ಮಿತಿಯಲ್ಲಿ ಅಕ್ರಮವಾಗಿ ಗೋವು ಸಾಗಾಟದ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಸೂಚನೆ ನೀಡಿದ್ದು, ರಾತ್ರಿ ಪೊಲೀಸ್ ಬೀಟ್ಗಳನ್ನು ಹೆಚ್ಚಿಸಲು ಮತ್ತು ಚೆಕ್ಪೋಸ್ಟ್ಗಳಲ್ಲಿ ಪರಿಶೀಲನಾ ಕಾರ್ಯವಿಧಾನಗಳನ್ನು ಬಲಪಡಿಬೇಕು ಎಂದು ಸೂಚಿಸಿದ್ದಾರೆ.
ಇನ್ನು ಜಾನುವಾರು ಖರೀದಿದಾರರು ಮತ್ತು ಮಾರಾಟಗಾರರನ್ನು ಗುರುತಿಸಲು, ಮಾರಾಟ ಪತ್ರವನ್ನು ಮಾಲೀಕರು ಮತ್ತು ಖರೀದಿದಾರರು ಇ-ಸ್ಟಾಂಪ್ ಪೇಪರ್ನಲ್ಲಿ ಸಹಿ ಮಾಡಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಫೋಟೋ ಪುರಾವೆಗಳೊಂದಿಗೆ ಪೊಲೀಸ್ ಪರಿಶೀಲನೆಯ ಸಮಯದಲ್ಲಿ ದಿನಾಂಕ ಕ್ಯಾಮೆರಾ ಆಯಪ್ಗೆ ನವೀಕರಿಸಬೇಕು ಎಂದು ಸೂಚನೆ ನೀಡಿದ್ದಾರೆ.