ಮುಂಬೈ, ಫೆ 05 (DaijiworldNews/KP): ವಾಣಿಜ್ಯ ನಗರಿ ಮುಂಬೈಯಲ್ಲಿ ಶೇ.3ರಷ್ಟು ವಿವಾಹ ವಿಚ್ಛೇದನವಾಗಲು ಟ್ರಾಫಿಕ್ ಜಾಮ್ಗಳೇ ಕಾರಣ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ಹೇಳುತ್ತಿದ್ದೇನೆ, ಒಮ್ಮೆ ಹೊರಗೆ ಹೋದರೆ ರಸ್ತೆಗಳಲ್ಲಿ ಹೊಂಡ-ಗುಂಡಿಗಳು, ಟ್ರಾಫಿಕ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ನಾನು ನೋಡುತ್ತಿದ್ದೇನೆ. ಈ ಟ್ರಾಫಿಕ್ನಿಂದಾಗಿ ಜನರು ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಅದರಿಂದ ಮುಂಬೈಯಲ್ಲಿ ಶೇ.3ರಷ್ಟು ವಿಚ್ಛೇದನವಾಗುತ್ತದೆ ಎಂದು ಮಹಾರಾಷ್ಟ್ರದ ವಿಕಾಸ್ ಅಗಾಡಿ ಸರ್ಕಾರದ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಎಂವಿಎ ಸರ್ಕಾರವು ಏಕಮುಖವಾಗಿ ಕಾರ್ಯ ನಿರ್ವಹಿಸುತ್ತಿದೆ ಮತ್ತು ಕೇವಲ ವಸೂಲಿ ಸರ್ಕಾರವಾಗಿದೆ. ಇನ್ನಾದರೂ ರಾಜ್ಯ ಸರ್ಕಾರ ತಮ್ಮ ತಪ್ಪುಗಳ ಬಗ್ಗೆ ಗಮನ ಹರಿಸುವಂತೆ ಕೇಳಿಕೊಳ್ಳುತ್ತೇನೆ ಎಂದರು.
ಇನ್ನು ವಿಚ್ಛೇದನಕ್ಕೆ ಹಲವು ಕಾರಣಗಳು ಇರಬಹುದು, ಆದರೆ ಅಮೃತಾ ಫಡ್ನವೀಸ್ ಮಾಜಿ ಮುಖ್ಯಮಂತ್ರಿಯವರ ಪತ್ನಿಯಾಗಿ ವಿಚ್ಛೇದನವಾಗಲು ಟ್ರಾಫಿಗ್ ಕಾರಣವಾಗುತ್ತದೆ ಎಂಬ ಅವರ ಹೇಳಿಕೆಯು ನನಗೆ ಆರ್ಶ್ಚಯ ಉಂಟುಮಾಡಿದೆ ಎಂದು ಮುಂಬೈ ಮೇಯರ್ ಕಿಶೋರ್ ಪೆಡ್ನೇಕರ್ ಟೀಕಿಸಿದರು.