ದೆಹಲಿ, ಫೆ 05 (DaijiworldNews/KP): ಪಂಜಾಬ್ ಚುನಾವಣೆಗೆ ಇನ್ನು 15ದಿನ ಬಾಕಿ ಇರುವಾಗ ಕಾಂಗ್ರೆಸ್ ಅಲ್ಲಿನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಪ್ರಮುಖ ಜಿ 23 ನಾಯಕರಾದ ಗುಲಾಂ ನಬಿ ಆಜಾದ್, ಮನೀಶ್ ತಿವಾರಿಯವರ ಹೆಸರನ್ನು ಲಿಸ್ಟ್ನಿಂದ ಕೈಬಿಡಲಾಗಿದೆ.
ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಟ್ವೀಟ್ ಮಾಡಿದ್ದು, ಒಂದೊಮ್ಮೆ ಸ್ಟಾರ್ ಪ್ರಚಾರಕ ಲಿಸ್ಟ್ನಲ್ಲಿ ನನ್ನ ಹೆಸರು ಇದ್ದಿದ್ದರೇ ನನಗೆ ನಿಜಕ್ಕೂ ಆಶ್ಚರ್ಯವಾಗುತ್ತಿತ್ತು, ಅದಕ್ಕೆ ಇರುವ ಕಾರಣಗಳೇನೂ ರಹಸ್ಯವಾಗಿ ಉಳಿದಿಲ್ಲ ಎಂದು ವ್ಯಂಗ್ಯವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು 2020ರಲ್ಲಿ ಮನೀಶ್ ತಿವಾರಿ, ಗುಲಾಂ ನಬಿ ಆಜಾದಿ ಸೇರಿದಂತೆ ಜಿ-23 ನಾಯಕರು ಕಾಂಗ್ರೆಸ್ ನಾಯಕತ್ವದ ವಿರುದ್ದ ಗರಂ ಆಗಿದ್ದರು, ಅದನ್ನು ಸೋನಿಯ ಗಾಂಧಿ ತುರ್ತಾಗಿ ಕಾಂಗ್ರೆಸ್ ಅನ್ನು ನವೀಕಸರಿಸವ ಅಗತ್ಯವಿದೆ ಎಂದು ಪತ್ರ ಬರೆಯುವ ಮೂಲಕ ಬಹಿರಂಗ ಪಡಿಸಿದ್ದರು. ಅದಕ್ಕಾಗಿ ಪಕ್ಷದ ನಾಯಕತ್ವವನ್ನು ಯಾರಾದರೂ ಪೂರ್ಣಾವಧಿಗೆ ವಹಿಸಿಕೊಳ್ಳಬೇಕು ಎಂದು ಹೇಳಿದ್ದರು.ಆ ಘಟನೆಯಿಂದ ಜಿ 23 ನಾಯಕರ ಹೆಸರನ್ನು ಕಾಂಗ್ರೆಸ್ ಕೈಬಿಟ್ಟಿದ್ದಾರೆ ಎಂಬ ಸುದ್ದಿ ದೊರಕಿದೆ.
ಮನೀಶ್ ತಿವಾರಿಯನ್ನು ಕಾಂಗ್ರೆಸ್ ಸ್ಟಾರ್ ಪ್ರಚಾರಕ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಟಿಎಂಸಿ ಮುಖಂಡ, ಅಭಿಜಿತ್ ಮುಖರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಚುನಾವಣೆ ನಿಮಿತ್ತ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಮುನೀಶ್ ತಿವಾರಿ ಹೆಸರನ್ನು ಕೈಬಿಟ್ಟಿರುವುದು ಬೇಸರದ ಸಂಗತಿ, ಕಾಂಗ್ರೆಸ್ ಇಂತಹ ಸಂಕುಚಿತ ಮನೋಭಾವದಿಂದಲೇ ಚುನಾವಣೆ ಎದುರಿಸಲು ಹೋದರೆ ಖಂಡಿತ ಪಕ್ಷ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.