ಬೆಂಗಳೂರು, ಫೆ 05 (DaijiworldNews/HR): ಹಿಜಾಬ್ ಹಾಕುವಂತಹದ್ದು ವ್ಯಕ್ತಿ ಸ್ವಾತಂತ್ರ್ಯ ಎಂದು ಕೆಲ ಸಂಘಟನೆಗಳು ಬೊಬ್ಬೆ ಹಾಕ್ತಾ ಇದ್ದಾರೆ. ವ್ಯಕ್ತಿ ಸ್ವಾತಂತ್ರ್ಯ ಎಂದು ಹೇಳುವವರು ಮಸೀದಿಯೊಳಗೆ ಮಹಿಳೆಯರಿಗೆ ಪ್ರವೇಶ ಕೊಡಲಿ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಹಿಜಾಬ್ ಹಾಕುವಂತಹದ್ದು ವ್ಯಕ್ತಿ ಸ್ವಾತಂತ್ರ್ಯ ಎಂದು ಸಿದ್ದರಾಮಯ್ಯನವರಾದಿಯಾಗಿ ಕೆಲ ಸಂಘಟನೆಗಳು ಬೊಬ್ಬೆ ಹಾಕ್ತಾ ಇದ್ದು, ವ್ಯಕ್ತಿ ಸ್ವಾತಂತ್ರ್ಯ ಎಂದು ಹೇಳುವವರು ಮಸೀದಿಯೊಳಗೆ ಮಹಿಳೆಯರಿಗೆ ಪ್ರವೇಶ ಕೊಡಲಿ. ಒಂದು ಕಡೆ ಮಹಿಳೆಯರಿಗೆ ಎಲ್ಲಾ ಪ್ರವೇಶವನ್ನು ನಿರಾಕರಣೆ ಮಾಡುವಂತಹದ್ದು, ಸರ್ಕಾರಿ ಶಾಲೆಗಳಲ್ಲಿ ಹೀಗೆಯೇ ಬರಬೇಕು ಎಂದು ಅವರೇ ನಿಯವಾವಳಿ ರೂಪಿಸುವಂತದ್ದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ನಮ್ಮ ರಾಜ್ಯದ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ವಸ್ತ್ರ ಸಂಹಿತೆಯು ಸಾಂಪ್ರದಾಯಿಕವಾಗಿ ಬಂದಿದೆ" ಎಂದರು.
ಇನ್ನು ಹಿಜಾಬ್ ಅಥವಾ ಬುರ್ಕಾವನ್ನು ಮನೆಯಿಂದ ಶಾಲೆಯ ಕಾಂಪೌಂಡಿನವರೆಗೆ ಹಾಕಿಕೊಂಡು ಬರಲಿ. ಆದರೆ ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳ ತರಹ ಸಮವಸ್ತ್ರದಲ್ಲೇ ಕುಳಿತು ಕೊಳ್ಳಬೇಕು ಎಂದಿದ್ದಾರೆ.
ಇಲ್ಲಿಯವರೆಗೆ ತುಂಬಾ ಶಾಲೆಗಳಲ್ಲಿ ಆ ರೀತಿ ನಡೆದುಕೊಂಡು ಬರ್ತಾ ಇದೆ. ಆದರೆ ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿ ಮಾಡಬೇಕು ಎಂದು ಕೆಲವರು ಹೊರಟರು. ಕೆಲವೇ ವಿದ್ಯಾರ್ಥಿಗಳನ್ನು ಎದುರು ಬಿಟ್ಟು ಈ ರೀತಿಯ ಪ್ರಕರಣಗಳನ್ನು ಮಾಡ್ತಾ ಇದ್ದಾರೆ ಎಂದು ಹೇಳಿದ್ದಾರೆ.