ಬೆಂಗಳೂರು, ಫೆ 05 (DaijiworldNews/KP): ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಜ್ ಹೆಸರಿನಲ್ಲಿ ಮತಾಂಧತೆ ಪ್ರದರ್ಶಿಸುವುದು ವಿರೋಧಿಸುತ್ತೇನೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಜಾಜ್ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಒಂದೂವರೆ ವರ್ಷದಿಂದ ವಿದ್ಯಾರ್ಥಿನಿಯರಿಗೆ ಯಾವುದೆ ಸಮಸ್ಯೆ ಇರಲಿಲ್ಲ, ಆದರೆ ಹೊರಗಿನ ಮತಾಂಧ ಶಕ್ತಿಗಳು ಮಕ್ಕಳ ಕೈಯಲ್ಲಿ ಈ ಕೆಲಸವನ್ನು ಮಾಡಿಸುತ್ತಿದ್ದಾರೆ. ಶಾಲಾ ಸಮವಸ್ತ್ರ ಧರಿಸಿ ಬರಬೇಕು ಅನ್ನುವ ನಿಯಮ ಇದೆ ಹೊರತು ಸಮಾಜವನ್ನು ಒಡೆಯುವ ಕುತಂತ್ರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.
ಇನ್ನು ಹಿಜಾಜ್ ಹೆಸರಿನಲ್ಲಿ ಮತಾಂಧತೆ ಮಾಡುವುದು ಸರಿಯಲ್ಲ, ಇತಂಹ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾಗಿತ್ತು, ಆದರೆ ಮತದ ಆಸೆಗಾಗಿ ರಾಜಕೀಯ ಹೇಳಿಕೆ ಕೊಡುತ್ತಿದ್ದಾರೆ ಎಂದು ಹೇಳಿದರು.
ನಮ್ಮಲ್ಲಿ ಸ್ಪಷ್ಟತೆ ಇದೆ, ಯಾವ ಗೊಂದಲವೂ ಇಲ್ಲ, ಕೆಲವರು ಸರ್ಕಾರವನ್ನು ಚುಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ. ಸಿದ್ದರಾಮಯ್ಯನ ಮನಸ್ಸಿನಲ್ಲಿ ಹಿಜಾಜ್ ಧರಿಸಿ ಬರುವುದು ತಪ್ಪು ಎಂಬ ಭಾವನೆ ಇರಬಹುದು, ಆದರೆ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಅನ್ನೋ ಕಾರಣಕ್ಕೆ ಈ ಇತಂಹ ಬೆಳವಣಿಗೆಗಳು ನಡೆದಿದೆ ಎಂದರು.