ಮೈಸೂರು,ಫೆ 05 (DaijiworldNews/HR): ಸಿದ್ಧರಾಮಯ್ಯ ಅವರಿಗೆ ಯಾವಾಗಲೂ ಸಾಬ್ರ ಒಲೈಕೆ ಮಾಡೋದೇ ಆಯ್ತು. ಸಿದ್ಧರಾಮಯ್ಯ ಏನ್ ಹಿಂದೂನಾ? ಅಥವಾ ಮತಾಂತರಗೊಂಡಿದ್ದಾರಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಹಿಜಾಬ್ ವಿವಾದದ ಕುರಿತು ಮಾತನಾಡಿರುವ ಅವರು, ಭಾರತದಲ್ಲಿ ಶೇ.15ರಷ್ಟು ಮುಸ್ಲೀಂ ಜನಸಂಖ್ಯೆ ಇರುವಾಗಲೇ ಈ ಕತೆ, ಇನ್ನೂ ಶೇ.50ರಷ್ಟು ಹೆಚ್ಚಾದ್ರೇ ಹಿಂದೂಗಳ ಕತೆ ಮುಗೀತು. ರಾಜಕಾರಣಿಗಳು ಈ ನೆಲ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅದರಂತೆ ನಡೆದುಕೊಳ್ಳಬೇಕು. ನೀವು ಈ ಸಂಸ್ಕೃತಿ ಗೌರವಿಸಲ್ಲ ಅಂದ್ರೇ ಪಾಕಿಸ್ತಾನಕ್ಕೆ ಬೇಕಾದ್ರೇ ಹೋಗಿ ಅಂತ ಕಿಡಿಕಾರಿದರು.
ಪ್ರತಿ ಬಾರಿ ಸಿದ್ಧರಾಮಯ್ಯ ಸಾಬ್ರನ್ನ ಒಲೈಕೆ ಮಾಡೋದೆ ಆಗುತ್ತದೆ. ಜಾತ್ಯಾತೀತತೆ ಅಂದ್ರೆ ಎಲ್ಲರನ್ನು ಒಟ್ಟಿಗೆ ಕರೆದೊಯ್ಯೋದು. ಅದನ್ನು ಬಿಟ್ಟು ವೋಟ್ ಬ್ಯಾಂಕ್ ಗಾಗಿ ಒಂದು ಸಮುದಾಯವನ್ನು ಓಲೈಕೆ ಮಾಡೋದಲ್ಲ. ಸಿಧ್ಧರಾಮಯ್ಯ ಹಿಂದೂನಾ ಅಥವಾ ಮತಾಂತರಗೊಂಡಿದ್ದಾರಾ ಅಂತ ಪ್ರಶ್ನಿಸಿದರು.