ನವದೆಹಲಿ, ಫೆ 05 (DaijiworldNews/MS): ಕರಾವಳಿಯಲ್ಲಿ ಹುಟ್ಟಿದ ಹಿಜಾಬ್ ವಿವಾದ ಇಂದು ರಾಷ್ಟ್ರರಾಜಕಾರಣದಲ್ಲಿ ಪ್ರತಿದ್ವನಿಸುತ್ತಿದೆ. ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ" ಹಿಜಾಬ್ ಹೆಸರಿನಲ್ಲಿ ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿಯುತ್ತಿದ್ದೇವೆ "ಎಂದು ಹೇಳಿದ್ದಾರೆ.
ವಸಂತಪಂಚಮಿ, ಸರಸ್ವತಿ ದೇವಿ ದಿನದ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ " ಹಿಜಾಬ್ ಹೆಸರಿನಲ್ಲಿ ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದೇವೆ. ಇಂದು ವಿದ್ಯೆ, ಜ್ಞಾನದ ದೇವತೆ ಸರಸ್ವತಿ ದೇವಿಯನ್ನು ಆರಾಧಿಸುವ ದಿನ, ಸರಸ್ವತಿ ದೇವಿ ಎಲ್ಲರಿಗೂ ಬುದ್ಧಿ ಕೊಡಲಿ, ದೇವಿ ಬೇಧ-ಭಾವ ತೋರಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರನ್ನು ತರಗತಿಯೊಳಗೆ ಬಿಡದ ವಿವಾದದ ಕಿಡಿ ಇದೀಗಾ ರಾಷ್ಟ್ರವ್ಯಾಪಿ ಹರಡಿದೆ. ಪ್ರಮುಖ ರಾಜಕೀಯ ಮುಖಂಡರು ಪರ-ವಿರೋಧವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೇ ವಿಚಾರವಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ , ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಸಿದ್ದರಾಮಯ್ಯ ಕಿಡಿಕಾರಿದ್ದರು.