ಬೆಂಗಳೂರು, ಫೆ 05 (DaijiworldNews/HR): ರಾಜ್ಯ ಸರ್ಕಾರ ವಿವಾದಗಳನ್ನು ಸೃಷ್ಟಿ ಮಾಡುವಲ್ಲಿ ಮುಂಚೂಣಿಯಲ್ಲಿದ್ದು, ಇದೀಗ ಹಿಜಾಬ್ ವಿವಾದ ಶುರು ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಹಿಜಾಬ್ ಸಂಪ್ರದಾಯ ಬಹಳ ವರ್ಷದಿಂದ ನಡೆದುಕೊಂಡು ಬಂದಿದೆ. ಮೈಸೂರು ಮಹಾರಾಜ ಕಾಲದಿಂದಲೂ ಜಾರಿಯಲ್ಲಿದೆ. ಹೆಣ್ಣುಮಕ್ಕಳು ತೆರಳುವ ಚಕ್ಕಡಿ ಗಾಡಿಗೂ ಪರದೆ ಹಾಕಿರುವ ಇತಿಹಾಸ ಇದೆ. ಇದು ಕೋವಿಡ್ ಸಮಯದಲ್ಲಿ ಹಾಕಿಕೊಳ್ಳುವಂತೆ ಆಗಿದ್ದು, ನಾನು ಹಾಕೊಂಡಿದ್ದೇನೆ, ಸಿಎಂ ಬೊಮ್ಮಾಯಿ ಕೂಡ ಹಿಜಾಬ್ ಹಾಕಿಕೊಂಡಿದ್ದಾರೆ ಎಂದರು.
ಇನ್ನು ಕಾಲೇಜಿಗೆ ನೀವು ಹೆಣ್ಣು ಮಕ್ಕಳ ಮುಖ ನೋಡೋಕೆ ಹೋಗೋದೋ ಅಥವಾ ವಿದ್ಯೆ ಕಲಿಯೋಕೋ ಎಂದು ಪ್ರಶ್ನಿಸಿದ್ದಾರೆ.
ಅನೇಕರು ಹಿಜಾಬ್ ಹಾಕೊಲ್ಲ, ಅವರಿಗೆ ನಾವು ಒತ್ತಡ ಹಾಕಿದ್ದೇವಾ? ಹೀಗಾಗಿ ನಾನು ಸರ್ಕಾರ ಶೀಘ್ರವಾಗಿ ನಿರ್ಧಾರ ಮಾಡಬೇಕು. ಇದನ್ನ ಕೂಡಲೇ ಕಮಿಷನರ್ ಹೈಕೋರ್ಟ್ ಆದೇಶ ಬರುವವರೆಗೂ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದಿದ್ದಾರೆ.