ಶ್ರೀನಗರ, ಫೆ 05 (DaijiworldNews/MS): ಶ್ರೀನಗರದ ಜಕುರಾ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಡೆದ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು, ಲಷ್ಕರ್ ಇ ತೋಯ್ಬಾದ ಮತ್ತೊಂದು ಅಂಗವಾದ ರೆಸಿಸ್ಟೆನ್ಸ್ ಫ್ರಂಟ್( ಟಿಆರ್ಎಫ್ )ನ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಕಾಶ್ಮೀರದ ಐಜಿಪಿ ಮಾಹಿತಿ ನೀಡಿದ್ದಾರೆ.
ಹತ್ಯೆಗೀಡಾದ ಭಯೋತ್ಪಾದಕರಲ್ಲಿ ಒಬ್ಬನನ್ನು ಇಖ್ಲಾಕ್ ಹಜಂ ಎಂದು ಗುರುತಿಸಲಾಗಿದ್ದು, ಇತ್ತೀಚೆಗೆ ಅನಂತ್ನಾಗ್ನ ಹಸನ್ಪೋರಾದಲ್ಲಿ ನಡೆದ ಹೆಡ್ಕಾನ್ಸ್ಟೇಬಲ್ ಅಲಿ ಮೊಹಮ್ಮದ್ ಹತ್ಯೆಯಲ್ಲಿ ಇಖ್ಲಾಕ್ ಭಾಗಿಯಾಗಿದ್ದನು ಎಂದು ತಿಳಿಸಿದ್ದಾರೆ.
ಕಾರ್ಯಾಚರಣೆಯ ಸ್ಥಳದಿಂದ ಎರಡು ಪಿಸ್ತೂಲ್ ಹಾಗೂ ಇತರ ಭಯೋತ್ಪಾದಕ ಸಾಮಾಗ್ರಿ ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.