ನವದೆಹಲಿ, ಫೆ 05 (DaijiworldNews/MS): ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದ್ದು, ಪಾಸಿಟಿವಿಟ್ ದರವೂ ಶೇ. 9.2 ರಿಂದ ಶೇ. 7.9 ಕ್ಕೆ ಕುಸಿದಿದೆ ಕಳೆದ 24 ಗಂಟೆಯಲ್ಲಿ 1,27, 952 ಲಕ್ಷ ಜನರಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 ಗಂಟೆಯಲ್ಲಿ 1059 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 13,31,648ರಷ್ಟಿದೆ.
ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಬಲಿಯಾದವರ ಸಂಖ್ಯೆ 501114 ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ 1,68,98,17,199 ಕೊವೀಡ್ ಲಸಿಕೆ ನೀಡಲಾಗಿದೆ.