ಬಾಗಲಕೋಟೆ, ಫೆ 05 (DaijiworldNews/MS): ಪದ್ಮಶ್ರೀ ಪುರಸ್ಕೃತ, ಸೂಫಿ ಸಂತ, ತತ್ವಪದ ಗಾಯಕ, ಕನ್ನಡ ನಾಡಿನ ಕಬೀರ ಎಂದೇ ಕರೆಸಿಕೊಂಡ , ತಮ್ಮ ಪ್ರವಚನ ಮತ್ತು ಸಂವಾದಗಳ ಮೂಲಕ ಹಿಂದೂ-ಮುಸ್ಲೀಮರ ಮಧ್ಯೆ ಭಾವೈಕ್ಯತೆಯನ್ನು ಸಾರುತ್ತಿದ್ದ ಮಹಾಲಿಂಗಪುರದ ಇಬ್ರಾಹಿಂ ಸುತಾರ ಶನಿವಾರ ಬೆಳಿಗ್ಗೆ 6:30ಕ್ಕೆ ನಿಧನರಾಗಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಹೃದಯದ ನೋವಿನಿಂದ ಬಳಲುತ್ತಿದ್ದ ಇಬ್ರಾಹಿಂ ಸುತಾರ್ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಇಂದು ಬೆಳಗ್ಗೆ ಇಬ್ರಾಹಿಂ ಸುತಾರ್ ಅವರಿಗೆ ಮತ್ತೆ ಲಘು ಹೃದಯಾಘಾತವಾಗಿತ್ತು. ತಕ್ಷಣ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದದಾರೂ, 76 ವರ್ಷದ ಇಬ್ರಾಹಿಂ ಸುತಾರ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಇಬ್ರಾಹಿಂ ಸುತಾರ್ ಅವರು ಪತ್ನಿ, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸುತಾರ ಅವರಿಗೆ ನಾಲ್ಕು ವರ್ಷಗಳ ಹಿಂದೆ (2018 ಏಪ್ರಿಲ್ 2) ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು.