ಮೈಸೂರು, ಫೆ 05 (DaijiworldNews/MS): ಸಮವಸ್ತ್ರ ಎನ್ನುವುದು ಬರೀ ಬಣ್ಣದ ಉಡುಪಲ್ಲ, ಅದು ಎಲ್ಲ ಮಕ್ಕಳು ಸಮಾನರು ಎಂದು ಸಾರುವ ವಸ್ತ್ರ ಸಂಹಿತೆ . ಎಲ್ಲರೂ ಮಕ್ಕಳು ಕಾಲೇಜಿಗೆ ಜಾಬ್ಗಾಗಿ ಬರುತ್ತಾರೆ. ಅದರೆ ನೀವು ಹಿಜಾಬ್ಗಾಗಿ ಬರುತ್ತೀದ್ದೀರಾ? ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿಜಾಬ್ ಧರಿಸಿಕೊಂಡು, ಟೋಪಿ ಹಾಕಿಕೊಂಡು ಕಲಿಯಬೇಕು ಎಂಬುದಾದರೆ ಮದರಸಾಗೆ ಹೋಗಲಿ. ಮದರಸಾದಲ್ಲಿ ನಿಮ್ಮ ಪ್ರತ್ಯೇಕ ಭಾವನೆ ಕಾಪಾಡಿಕೊಳ್ಳಬಹುದು. ಸರಕಾರಿ ಶಾಲೆಗಳಲ್ಲಿ ಈ ಪ್ರತ್ಯೇಕತೆ ಸಾಧ್ಯವಿಲ್ಲ. ಸರ್ಕಾರ ಕೂಡಾ ಒತ್ತಡ, ಆಕ್ರಮಣ, ಟೀಕಾಪ್ರಹಾರದ ನಡುವೆಯೂ ಸಮವಸ್ತ್ರ ಕಡ್ಡಾಯಕ್ಕೆ ಬದ್ಧವಾಗಿರೋದು ಒಳ್ಳೆಯ ಸಂದೇಶ ಎಂದು ಹೇಳಿದ್ದಾರೆ.
ಸ್ಲಾಂ, ಕ್ರಿಶ್ಚಿಯನ್ ಮರುಭೂಮಿಯಲ್ಲಿ ಹುಟ್ಟಿ ನೆಲೆಗಾಗಿ ಹುಡುಕಿಕೊಂಡು ಇಲ್ಲಿಗೆ ಬಂದಿವೆ ಈ ದೇಶಕ್ಕೆ ಬಂದಿದೆ. ಆದರೆ ಇದು ಬ್ರಿಟಿಷರ ಭಾರತವಲ್ಲ. ಇದು ಭರತಖಂಡ ಇಲ್ಲಿನ ಸಂಸ್ಕೃತಿ ಒಪ್ಪಿಕೊಳ್ಳಲೇ ಬೇಕು ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಿದ್ದ'ರಾಮ'ಯ್ಯ, ಸಿದ್ದ'ರಹೀಮ'ಯ್ಯ ಆಗ್ತಾರೆ ಹೀಗಾಗಿ ಅವರನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.